ಹಳೆಯದ್ದನ್ನು ಮರೆಯೋಣ, ಒಟ್ಟಿಗೆ ಮುನ್ನಡೆಯೋಣ: ಭಾರತಕ್ಕೆ ಚೀನಾ ಮನವಿ
ಡೋಕ್ಲಾಮ್ ವಿವಾದದ ವಿಷಯದಲ್ಲಿ ಭಾರತದ ಎದುರು ಮಂಡಿಯೂರಿದ್ದ ಚೀನಾ ಈಗ ಹಿಂದಿನದೆಲ್ಲವನ್ನೂ ಮರೆತುಬಿಡುವಂತೆ ಭಾರತಕ್ಕೆ ಮನವಿ ಮಾಡಿದ್ದು, ಇನ್ನು ಮುಂದೆ ಒಟ್ಟಿಗೆ ಮುನ್ನಡೆಯೋಣ ಎಂಬ ಸಲಹೆ ನೀಡಿದೆ.

Published On :
ನವದೆಹಲಿ: ಡೋಕ್ಲಾಮ್ ವಿವಾದದ ವಿಷಯದಲ್ಲಿ ಭಾರತದ ಎದುರು ಮಂಡಿಯೂರಿದ್ದ ಚೀನಾ ಈಗ ಹಿಂದಿನದೆಲ್ಲವನ್ನೂ ಮರೆತುಬಿಡುವಂತೆ ಭಾರತಕ್ಕೆ ಮನವಿ ಮಾಡಿದ್ದು, ಇನ್ನು ಮುಂದೆ ಒಟ್ಟಿಗೆ ಮುನ್ನಡೆಯೋಣ ಎಂಬ ಸಲಹೆ ನೀಡಿದೆ.
ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿಯ ಅಧಿಕಾರಿ ಲುವೊ ಝಾಹೋಯಿಯಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿದ್ದು, ಹಿಂದಿನದ್ದನ್ನು ಮರೆತು ಒಟ್ಟಿಗೆ ಮುನ್ನಡೆಯಲು ಭಾರತ-ಚೀನಾಗೆ ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಚೀನಾ ದ್ವಿಪಕ್ಷೀಯ ಸಂಬಂಧದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಇತ್ತೀಚೆಗಷ್ಟೇ ನಡೆದ ಬಿಕ್ಸ್ ಶೃಂಗಸಭೆಯಲ್ಲಿ ಭೇಟಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರು ಸಮನ್ವಯ ಹಾಗೂ ಸಹಕಾರದ ಸಂದೇಶವನ್ನು ಸ್ಪಷ್ಟವಾಗಿ ರವಾನೆ ಮಾಡಿದ್ದಾರೆ. ಹಳೆಯದ್ದನ್ನು ಮರೆತು ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಬೇಕಿದೆ ಎಂದು ಚೀನಾ ರಾಯಭಾರಿ ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


