ಭೋಪಾಲ್: ಐಸಿಐಸಿಐ ಬ್ಯಾಂಕ್ ಮಾಜಿ ನೌಕರನಿಂದ ಪಾಸ್ ವರ್ಡ್ ಬಳಸಿ ಎಟಿಎಂ ದರೋಡೆ!
ಕಳೆದ ವಾರ ಐಸಿಐಸಿಐ ಬ್ಯಾಂಕಿನ ಎಟಿಎಂನಿಂದ 13.15 ಲಕ್ಷ ರೂಪಾಯಿ ಕಳ್ಳತನ ಮಾಡಿದ ಆರೋಪಿಗಳು ವೃತ್ತಿಪರ...

Published On :
ಭೋಪಾಲ್: ಕಳೆದ ವಾರ ಐಸಿಐಸಿಐ ಬ್ಯಾಂಕಿನ ಎಟಿಎಂನಿಂದ 13.15 ಲಕ್ಷ ರೂಪಾಯಿ ಕಳ್ಳತನ ಮಾಡಿದ ಆರೋಪಿಗಳು ವೃತ್ತಿಪರ ದರೋಡೆಕೋರರಲ್ಲ ಬದಲಿಗೆ ಅವರಲ್ಲಿಯೇ ಒಬ್ಬನು ಎಂದು ತಿಳಿದ ಭೋಪಾಲ್ ಸಿಟಿ ಪೊಲೀಸರಿಗೆ ಆಘಾತ ಕಾದಿತ್ತು. ಮೊನ್ನೆ 22 ಮತ್ತು 23ರಂದು ರಾತ್ರಿ ನಡೆದ ಎಟಿಎಂ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಕಾನ್ಸ್ಟೇಬಲ್ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷಾ ಸೇನಾ ಪಡೆಯ 14ನೇ ಬೆಟ್ಟಾಲಿಯನ್ ನ ಕಾನ್ಸ್ಟೇಬಲ್ ಪನ್ ಸಿಂಗ್ ಗೌತಮ್ ಮತ್ತು ಎಟಿಎಂ ಹಣ ಮರು ತುಂಬುವಿಕೆ ಕಂಪೆನಿಯ ಉದ್ಯೋಗಿ ಸುರ್ಜಿತ್ ಸಿಂಗ್ ಪವೈಯಾ ದರೋಡೆ ಮಾಡಿದವರಾಗಿದ್ದಾರೆ. ಇವರಿಬ್ಬರೂ ಬಿಂದ್ ಜಿಲ್ಲೆಯಲ್ಲಿ ಬಾಲ್ಯದಿಂದಲೇ ಸ್ನೇಹಿತರಾಗಿದ್ದರು ಎಂದು ಉಪ ಪೊಲೀಸ್ ಮಹಾ ನಿರ್ದೇಶಕ ಸಂತೋಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇವರಿಬ್ಬರೂ ಬಿಂದ್ ಜಿಲ್ಲೆಯಲ್ಲಿ 7ನೇ ತರಗತಿವರೆಗೆ ಒಟ್ಟಿಗೆ ಓದುತ್ತಿದ್ದರು.
ಕೆಲ ತಿಂಗಳ ಹಿಂದೆ ಇವರಿಬ್ಬರೂ ಹಲವು ವರ್ಷಗಳ ನಂತರ ಭೋಪಾಲ್ ನಲ್ಲಿ ಭೇಟಿಯಾಗಿದ್ದರು. ತಾನು ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬಿಸುವ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪವೈಯ ಗೌತಮ್ ಗೆ ಹೇಳಿದ್ದ. ಆಗ ಪೊಲೀಸ್ ಕಾನ್ಸ್ಟೇಬಲ್ ಒಂದು ಉಪಾಯ ಹೂಡುತ್ತಾನೆ. ಪವಯ್ಯಾ ಕಳೆದ ಜೂನ್ ತಿಂಗಳಿನಲ್ಲಿ ಒಂದು ಕ್ಯಾಶ್ ಮ್ಯಾನೇಜ್ ಮೆಂಟ್ ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ ಭೋಪಾಲ್ ನ ಪಿಪ್ಲಾನಿಯಲ್ಲಿರುವ ಐಸಿಐಸಿಐ ಬ್ಯಾಂಕಿನ ಎಟಿಎಂನ ಪಾಸ್ ವರ್ಡ್ ನೆನಪಿಟ್ಟುಕೊಂಡಿದ್ದ.
ನಂತರ ಇಬ್ಬರೂ ಸೇರಿ ಹಣ ದೋಚಲು ಉಪಾಯ ಹೂಡುತ್ತಾರೆ. ಪವೈಯಾ ಅನೇಕ ವಾರಗಳವರೆಗೆ ಎಟಿಎಂನಿಂದ ಹಣ ಕದಿಯುವ ಬಗ್ಗೆ ಪೊಲೀಸ್ ಕಾನ್ಸ್ಟೇಬಲ್ ಗೆ ಹೇಳಿಕೊಡುತ್ತಾನೆ.
ಮೊದಲು ಪೊಲೀಸ್ ಕಾನ್ಸ್ಟೇಬಲ್ ಮೊನ್ನೆ 22ರಂದು ಕದಿಯಲು ಹೋಗುತ್ತಾನೆ. ಆದರೆ ವಿಫಲನಾಗುತ್ತಾನೆ. ಎರಡನೇ ಸಲ ಪವೈಯಾ ಹೋಗುತ್ತಾನೆ. ಗೌತಮ್ ಸ್ವಲ್ಪ ದೂರದಲ್ಲಿ ನಿಂತು ನೋಡುತ್ತಾನೆ. ತನಗೆ ನೆನಪಿದ್ದ ಎಟಿಎಂನ ಪಾಸ್ ವರ್ಡ್ ಹಾಕಿ 13.15 ಲಕ್ಷ ರೂಪಾಯಿ ದೋಚಿಕೊಂಡನು. ರಾತ್ರಿ ವೇಳೆ ಹೋಗಿ ತನ್ನ ಗುರುತು ಸಿಗಬಾರದೆಂದು ಎಟಿಎಂ ಕೇಂದ್ರದ ಕರೆಂಟ್ ಸ್ವಿಚ್ ನ್ನು ಆಫ್ ಮಾಡುತ್ತಾನೆ. ದುರದೃಷ್ಟಕ್ಕೆ ಬ್ಯಾಂಕ್ ಎಟಿಎಂನ ಪಾಸ್ ವರ್ಡ್ ಬದಲಾಯಿಸಿರಲಿಲ್ಲ.
ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ಹಿಡಿದು 13.09 ಲಕ್ಷ ರೂಪಾಯಿಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


