ಪಾಕಿಸ್ತಾನ ಬಾಲಕಿಗೆ ಹೃದಯ ಶಸ್ತ್ರಚಿಕಿತ್ಸೆಗಾಗಿ ವೀಸಾ ಒದಗಿಸಿದ ಸುಷ್ಮಾ ಸ್ವರಾಜ್
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ 7ವರ್ಷದ ಪಾಕಿಸ್ತಾನಿ ಬಾಲಕಿಗೆ ಭಾರತಕ್ಕೆ ಬರಲು ವೈದ್ಯಕೀಯ ವೀಸಾ ಒದಗಿಸಿದ್ದಾರೆ.

Published On :
ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ 7ವರ್ಷದ ಪಾಕಿಸ್ತಾನಿ ಬಾಲಕಿಗೆ ಭಾರತಕ್ಕೆ ಬರಲು ವೈದ್ಯಕೀಯ ವೀಸಾ ಒದಗಿಸಿದ್ದಾರೆ.
ಭಾರತದಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಆಗಮಿಸಲಿರುವ ಪಾಕಿಸ್ತಾನಿ ಬಾಲಕಿಗೆ ಸುಷ್ಮಾ ವೀಸಾ ನೀಡಿದ್ದಾರೆ.
ಸಹಾಯ ಕೇಳಿ ಸುಷ್ಮಾಗೆ ಟ್ವೀಟ್ ಮಾಡಿದ್ದ ಬಾಲಕಿಯ ತಾಯಿ ನೈದಾ ಶೋಯಬ್ ಕೋರಿಕೆಗೆ ಸ್ಪಂದಿಸಿದ ಸುಷ್ಮಾ ಸ್ವರಾಜ್ 'ನಾವೂ ಸಹ ಬಾಲಕಿ ಬೇಗ ಗುಣವಾಗಲೆಂದು ಆಶಿಸುತ್ತೇವೆ' ಎಂದಿದ್ದಾರೆ.
ಆಗಸ್ಟ್ ನಿಂದ ತನ್ನ ಮನವಿ ಬಾಕಿ ಉಳಿದಿದೆ ಎಂದಿರುವ ನೈದಾ ಶೋಯೆಬ್ ತಮ್ಮ ವೀಸಾ ಸ್ಕ್ಯಾನ್ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ.
ಜೂನ್ ತಿಂಗಳಲ್ಲಿ, ನಾಲ್ಕು ತಿಂಗಳ ಪಾಕಿಸ್ತಾನಿ ಮಗು ರೋಹಾನ್ ಗೆ ಭಾರತದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಪದಲು ಸಚಿವರು ಸಹಾಯ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
VisaSushma Swarajಸುಷ್ಮಾ ಸ್ವರಾಜ್ವೀಸಾPakistani girlopen heart surgeryಪಾಕಿಸ್ತಾನಿ ಹುಡುಗಿತೆರೆದ ಹೃದಯ ಶಸ್ತ್ರಚಿಕಿತ್ಸೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


