ದೇಶ

ಗೋರಖ್ ಪುರ: 5ನೇ ತರಗತಿ ಬಾಲಕ ಆತ್ಮಹತ್ಯೆ

ತರಗತಿಯ ಶಿಕ್ಷಕಿ ನೀಡಿದ ಶಿಕ್ಷೆಯಿಂದ ಬೇಸರಗೊಂಡ 5ನೇ ತರಗತಿ ಬಾಲಕ ವಿಷ ಸೇವಿಸಿ ...

ಗೋರಖ್ ಪುರ:  5ನೇ ತರಗತಿ ಬಾಲಕ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ಬಾಲಕನ ಐಡಿ ಕಾರ್ಡು
Published On :
ಗೋರಖ್ ಪುರ್(ಉತ್ತರ ಪ್ರದೇಶ): ತರಗತಿಯ ಶಿಕ್ಷಕಿ ನೀಡಿದ ಶಿಕ್ಷೆಯಿಂದ ಬೇಸರಗೊಂಡ 5ನೇ ತರಗತಿ ಬಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ.
ಗೋರಖ್ ಪುರದ ಸೈಂಟ್ ಆಂಟೊನಿ ಕಾನ್ವೆಂಟ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ 11 ವರ್ಷದ ಬಾಲಕ ನವನೀತ್ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನಿಗೆ ತರಗತಿಯ ಶಿಕ್ಷಕಿ ಮೊನ್ನೆ 15ರಂದು ಶಿಕ್ಷೆ ನೀಡಿದ್ದರು ಎಂಬ ಕಾರಣಕ್ಕೆ ಬೇಸತ್ತು ವಿಷ ಸೇವಿಸಿದ್ದನು. ಆತನನ್ನು ಬಿಆರ್ ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 
ನವನೀತ್ ನ ಶಾಲಾ ಬ್ಯಾಗ್ ನಲ್ಲಿ ಆತ್ಮಹತ್ಯೆಯ ನೋಟ್ ಸಿಕ್ಕಿದ್ದು, ಅದರಲ್ಲಿ ತರಗತಿಯಲ್ಲಿ ಶಿಕ್ಷಕಿ ನೀಡುವ ಶಿಕ್ಷೆಯನ್ನು ತಾಳಲಾರದೆ ಜೀವನ ಕೊನೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಆತ್ಮಹತ್ಯೆಯ ನೋಟ್ ನಲ್ಲಿ ಬಾಲಕ, ಅಪ್ಪ ಇಂದು ನನ್ನ ಮೊದಲ ಪರೀಕ್ಷೆಯಾಗಿದೆ. ನನ್ನ ತರಗತಿಯ ಶಿಕ್ಷಕಿ ಬೆಳಗ್ಗೆ 9.15ರವರೆಗೂ ನನ್ನನ್ನು ಅಳಿಸುತ್ತಾ ಕುಳ್ಳಿರಿಸಿದ್ದರು. ಮೂರು ಪಿರೆಡ್ ನನ್ನನ್ನು ನಿಲ್ಲಿಸಿದ್ದರು. ಅವರ ಮಾತಷ್ಟೇ ಅವರಿಗೆ ಮುಖ್ಯವಾಗಿದೆ. ಇಂದು ನನ್ನ ಜೀವನವನ್ನು ಮುಗಿಸುತ್ತಿದ್ದೇನೆ. ಇಂತಹ ಶಿಕ್ಷೆ ಯಾರಿಗೂ ಕೊಡಬಾರದೆಂದು ಶಿಕ್ಷಕಿಗೆ ಹೇಳಿ ಎಂದು ಬರೆದಿದ್ದಾನೆ.
ಈ ದುರಂತಕ್ಕೆ ಶಾಲೆಯ ಆಡಳಿತ ವರ್ಗವೇ ಕಾರಣ ಎಂದು ನವನೀತ್ ನ ತಂದೆ ಆರೋಪಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 306ರಡಿ ಶಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ವಿನಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಶಿಕ್ಷಕಿ ಭಾವನಾರನ್ನು ಬಂಧಿಸಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ನವನೀತ್ ನ ಬ್ಯಾಗಿನಲ್ಲಿ ವಿಷಯ ಬಾಟಲ್ ಸಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.