ದೇಶ

ಭಾರತ-ಜಪಾನ್ ರೈಲು ಸಹಕಾರದ ಬಗ್ಗೆ ಸಂತಸವಿದೆ: ಚೀನಾ

ಭಾರತದ ಮೊದಲ ಬುಲೆಟ್ ರೈಲು ನಿರ್ಮಾಣಕ್ಕಾಗಿ ಜಪಾನ್-ಭಾರತ ರೈಲು ಸಹಕಾರವನ್ನು ವಿಸ್ತರಿಸುತ್ತಿರುವುದರ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದ್ದು, ಭಾರತ-ಜಪಾನ್ ರೈಲು ಸಹಕಾರದ ಬಗ್ಗೆ...

ಭಾರತ-ಜಪಾನ್ ರೈಲು ಸಹಕಾರದ ಬಗ್ಗೆ ಸಂತಸವಿದೆ: ಚೀನಾ
ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ
Published On :
ಬೀಜಿಂಗ್: ಭಾರತದ ಮೊದಲ ಬುಲೆಟ್ ರೈಲು ನಿರ್ಮಾಣಕ್ಕಾಗಿ ಜಪಾನ್-ಭಾರತ ರೈಲು ಸಹಕಾರವನ್ನು ವಿಸ್ತರಿಸುತ್ತಿರುವುದರ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದ್ದು, ಭಾರತ-ಜಪಾನ್ ರೈಲು ಸಹಕಾರದ ಬಗ್ಗೆ ಸಂತಸವಿದೆ ಎಂದು ಹೇಳಿದೆ. 
ಜಪಾನ್-ಭಾರತ ರೈಲು ಸಹಕಾರ ವೃದ್ಧಿಸುತ್ತಿರುವ ಬೆಳವಣಿಗೆಯ ಬಗ್ಗೆ ಸಂತಸವಿದ್ದು, ಈ ರೀತಿಯ ಮೂಲಸೌಕರ್ಯ ಯೋಜನೆಗಳನ್ನು ಉತ್ತೇಜಿಸಲು ಚೀನಾ ಸಿದ್ಧವಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಿಂಗ್ ಶೌಂಗ್ ಹೇಳಿದ್ದಾರೆ. 
ರೈಲ್ವೆ ಸಹಕಾರಕ್ಕೆ ಸಂಬಂಧಪಟ್ಟಂತೆ ಅದು ಜಪಾನ್-ಭಾರತದ ನಡುವಿನ ರಾಜಕೀಯ ಸಹಕಾರದ ಒಂದು ಭಾಗವಾಗಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಹೇಳಿಕೆ ಮಹತ್ವ ಪಡೆದುಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.