ಮಲಯಾಳಂ ನಟಿ ಅಪಹರಣ ಪ್ರಕರಣ: ಕೇರಳ ಪೋಲೀಸರಿಂದ ನಾದಿರ್ ಷಾ ಗೆ ಸಮನ್ಸ್
ಮಲಯಾಲಂ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ ನಾದಿರ್ ಷಾ ಅವರನ್ನು ಪುನಃ ವಿಚಾರಣೆಗೆ ಹಾಜರಾಗುವಂತೆ ಕೇರಳ ಪೋಲಿಸರು ಸಮನ್ಸ್ ಜಾರಿ ಮಾಡಿದ್ದಾರೆ.
Published On :
ಕೊಚ್ಚಿ: ಮಲಯಾಲಂ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ನಿರ್ದೇಶಕ ನಾದಿರ್ ಷಾ ಅವರನ್ನು ಪುನಃ ವಿಚಾರಣೆಗೆ ಹಾಜರಾಗುವಂತೆ ಕೇರಳ ಪೋಲಿಸರು ಸಮನ್ಸ್ ಜಾರಿ ಮಾಡಿದ್ದಾರೆ. ಈ ಹಿಂದೆ ಜೂನ್ ತಿಂಗಳಲ್ಲಿ ನಾದಿರ್ ಷಾ ಅವರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ 13 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ಷಾ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದು ಒಮ್ಮೆ ಬಿಡುಗಡೆಯಾದ ಬಳಿಕ, ಪೋಲೀಸರ ಮುಂದೆ ಹಾಜರಾಗಬೇಕಾಗಿದೆ. ಈ ನಡುವೆ ಷಾ ಅವರು ನಿರೀಕ್ಷಿತ ಜಾಮೀನು ಕೋರಿ ಕೇರಳ ಹೈ ಕೋರ್ಟ್ ಮೊರೆ ಹೋಗಿದ್ದಾರೆ. ಈ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದೆ.
ನಟಿಯು ಕಳೆದ ಫೆಬ್ರವರಿಯಲ್ಲಿ ತ್ರಿಶೂರ್ ನಿಂದ ಕೊಚ್ಚಿ ಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅಪಹರಣವು ನಡೆದಿತ್ತು.
ನಟ, ನಿರ್ದೇಶಕ ಲಾಲ್ ಅವರ ನಿವಾಸದ ಬಳಿ ನಟಿಯನ್ನು ಬಿಟ್ಟು ಹೋಗುವ ಮುನ್ನ ಅವಳನ್ನು ಬಲವಂತವಾಗಿ ವಾಹನದಲ್ಲಿ ಕರೆದೊಯ್ದು ಸುಮಾರು ಎರಡು ಗಂಟೆಗಳ ಕಾಲ ಸುತ್ತಾಟ ನಡೆಸಿದ್ದರು ಎನ್ನಲಾಗಿದೆ.
ಮುಖ್ಯ ಆರೋಪಿಗಳಾದ ಪಲ್ಸರ್ ಸುನಿ ಮತ್ತು ಅವರ ಸಹಚರರು ನೈಜ ಅಪಹರಣದಲ್ಲಿ ಭಾಗವಹಿಸಿದ್ದು ಅವರನ್ನು ಒಂದು ವಾರದ ನಂತರ ಬಂಧಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

