ದೇಶ

ದೇಶದ ತಳಹದಿಯನ್ನು ಧರ್ಮ ವ್ಯಾಖ್ಯಾನಿಸುವುದಿಲ್ಲ: ಯೋಗಿ ಆದಿತ್ಯನಾಥ್

ದೇಶದ ತಳಹದಿಯನ್ನು ಯಾವುದೇ ಧರ್ಮ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಉತ್ತರ...

Published On :
ಗೋರಖ್ ಪುರ್(ಉತ್ತರ ಪ್ರದೇಶ): ದೇಶದ ತಳಹದಿಯನ್ನು ಯಾವುದೇ ಧರ್ಮ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಗೋರಖ್ ನಾಥ್ ಪೀಠದ ಪ್ರಧಾನ ಅರ್ಚಕ ಮಹಂತ್ ದಿಗ್ವಿಜಯ್ ನಾಥ್ ಅವರ 48ನೇ ಪುಣ್ಯತಿಥಿ ಹಾಗೂ ಮಹಂತ್ ಅವೈದ್ಯನಾಥ್ ಮತ್ತು ಮಹಂತ್ ದಿಗ್ವಿಜಯ್ ನಾಥ್ ಅವರ 3ನೇ ವರ್ಷಾಚರಣೆ ಸಂದರ್ಭದಲ್ಲಿ ನೆರೆದಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ತಳಹದಿ ಅದರ ಸಂಸ್ಕೃತಿಯನ್ನು ಅವಲಂಬಿಸಿದೆ ಎಂದರು.
ಧರ್ಮ, ಪೂಜೆ, ಪುನಸ್ಕಾರಗಳು ದೇಶದ ಮೂಲ ತಳಹದಿ ಎಂದರೆ ಜನರು ಪ್ರಶ್ನೆ ಮಾಡುತ್ತಾರೆ. ನನ್ನ ಪ್ರಕಾರ ಇಡೀ ಆಲೋಚನೆಯೇ ಒಂದು ಕಟ್ಟು ಕಥೆ. ಧರ್ಮ ದೇಶದ ಆಧಾರ ಅಥವಾ ತಳಹದಿಯಾಗಿದ್ದರೆ, ಸ್ವಾತಂತ್ರ್ಯ ಸಮಯದಲ್ಲಿ ರಚಿಸಲ್ಪಟ್ಟ ಪಾಕಿಸ್ತಾನ 1971ರಲ್ಲಿ ಎರಡು ದೇಶಗಳಾಗಿ ಇಬ್ಭಾಗವಾಗುತ್ತಿರಲಿಲ್ಲ ಎಂದು ಆದಿತ್ಯನಾಥ್ ಹೇಳಿದರು.
ಭಯೋತ್ಪಾದನೆಯನ್ನು ಇಸಿಸ್ ಸಂಘಟನೆ ಹುಟ್ಟಿಸಿ ಬೆಳೆಸುವ ರೀತಿ ಮತ್ತು ವಿಶ್ವಾದ್ಯಂತ ಇರುವ ಅನಿಶ್ಚಿತತೆ ನೋಡಿದರೆ ಯಾವುದೇ ಧರ್ಮ ಕೂಡ ಮೂಲ ತಳಹದಿಯನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿಸುತ್ತದೆ. ರಾಷ್ಟ್ರದ ಮೂಲ ತಳಿಹದಿಯೆಂದರೆ ಅದರ ಸಂಸ್ಕೃತಿ ಎಂದರು.
ನಿನ್ನೆಯ ಮೊದಲ ದಿನದ ಕಾರ್ಯಕ್ರಮದಲ್ಲಿ ಆದಿತ್ಯನಾಥ್ ಏಕತೆ ಬಗ್ಗೆ ಸಾರಿದ್ದರು.
ರಾಮಾಯಣದಲ್ಲಿ ವಿಭೀಷಣ ತನ್ನ ಅಣ್ಣನಿಗೆ ಸಹಾಯ ಮಾಡದಿದ್ದರಿಂದ ರಾವಣ ಯುದ್ಧದಲ್ಲಿ ಸೋತುಹೋದ. ರಾಮನಿಗೆ ಅವನ ಸಹೋದರ ಲಕ್ಷ್ಮಣ ಸಹಾಯ ಮಾಡಿದ್ದರಿಂದ ರಾಮ ಯುದ್ಧದಲ್ಲಿ ಗೆದ್ದನು ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಜಾತಿ ಆಧಾರದ ಮೇಲೆ ದೇಶ ವಿಭಜನೆಗೊಂಡರೆ ನಮಗೆ ರಾವಣನ ಪರಿಸ್ಥಿತಿ ಬರುತ್ತದೆ. ನಾವು ಒಗ್ಗಟ್ಟಿನಿಂದ ಇದ್ದರೆ ರಾಮನಂತೆ ಜಯಶಾಲಿಯಾಗಬಹುದು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.