ಬ್ರಿಕ್ಸ್ ಶೃಂಗಸಭೆಗಾಗಿ ಚೀನಾಗೆ ತೆರಳಿದ ಮೋದಿ
ಯಾಮೆನ್ ನಲ್ಲಿ ನಡೆಯಲಿರುವ ಒಂಬತ್ತನೇ ಬ್ರಿಕ್ಸ್ ಶೃಂಗಸಭೆಗೆ ಹಾಜರಾಗಲು ಪ್ರಧಾನಿ ನರೇಂದ್ರ ಮೋದಿ ಚೀನಾಗೆ ತೆರಳಿದ್ದಾರೆ.

Published On :
ನವದೆಹಲಿ: ಕ್ಸಿಯಾಮೆನ್ ನಲ್ಲಿ ನಡೆಯಲಿರುವ ಒಂಬತ್ತನೇ ಬ್ರಿಕ್ಸ್ ಶೃಂಗಸಭೆಗೆ ಹಾಜರಾಗಲು ಪ್ರಧಾನಿ ನರೇಂದ್ರ ಮೋದಿ ಚೀನಾಗೆ ತೆರಳಿದ್ದಾರೆ.
ಪ್ರಧಾನ ಮಂತ್ರಿ ಅವರ ಈ ಪ್ರವಾಸ ಭಯೋತ್ಪಾದನೆಯ ವಿಚಾರವನ್ನು, ಶೃಂಗಸಭೆಯಲ್ಲಿ ಹೇಗೆ ಮಂಡಿಸುತ್ತಾರೆ ಮತ್ತು ಬ್ರಿಕ್ಸ್ ರಾಷ್ಟ್ರಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ ಎನ್ನುವ ಕುತೂಹಲ ಹುಟ್ಟಿಸಿದೆ.
ಬ್ರಿಕ್ಸ್ ಶೃಂಗದ ಸಂದರ್ಭದಲ್ಲಿ ತಾನು ಹೆಚ್ಚು ಲಾಭದಾಯಕ ಚರ್ಚೆಗಳನ್ನು ಮತ್ತು ಸಕಾರಾತ್ಮಕ ಫಲಿತಾಂಶಗಳಿಗೆ ಎದುರು ನೋಡುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ಚೀನಾಗೆ ತೆರಳುವುದಕ್ಕೂ ಮುನ್ನ ತಿಳಿಸಿದರು.
ಫೇಸ್ ಬುಕ್ ಪೋಸ್ಟ್ ನಲ್ಲಿ ಪ್ರಧಾನಿ, "ಕಳೆದ ವರ್ಷ ಅಕ್ಟೋಬರ್ ನಲ್ಲಿ ಗೋವಾದಲ್ಲಿ ಬ್ರಿಕ್ಸ್ ಶೃಂಗಸಭೆಗೆ ನಡೆಸುವ ಮಾಡುವ ಅವಕಾಶ ಭಾರತಕ್ಕೆ ದೊರೆತಿತ್ತು, ಗೋವಾ ಶೃಂಗಸಭೆಯ ಫಲಿತಾಂಶಗಳ ಬಗ್ಗೆ ನಾನು ಗಮನ ನೀಡುತ್ತೇನೆ. ಚೀನಾ ಅಧ್ಯಕ್ಷತೆಯ ಅಡಿಯಲ್ಲಿ ಸಹ ಲಾಭದಾಯಕ ಚರ್ಚೆಗಳನ್ನು ಮತ್ತು ಸಕಾರಾತ್ಮಕ ಫಲಿತಾಂಶಗಳಿಗೆ ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.
ಎಲ್ಲಾ ಐದು ದೇಶಗಳಿಂದ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಉದ್ಯಮ ಕ್ಷೇತ್ರದ ಪ್ರಮುಖರು ಪ್ರತಿನಿಧಿಸುವ ಬ್ರಿಕ್ಸ್ ಬ್ಯುಸಿನೆಸ್ ಕೌನ್ಸಿಲ್ ನೊಂದಿಗೆ ಸಹ ಸಂವಹನನಡೆಸುವುದಾಗಿ ಪ್ರಧಾನಿ ಹೇಳಿದ್ದಾರೆ.
"ಜೊತೆಗೆ, ಸೆಪ್ಟೆಂಬರ್ 5 ರಂದು ಅಧ್ಯಕ್ಷ ಕ್ಸಿ ಝಿಂಗ್ ಪಿನ್ ಆಯೋಜಿಸುವ ಎಮರ್ಜಿಂಗ್ ಮಾರ್ಕೆಟ್ಸ್ ಮತ್ತು ಡೆವಲಪಿಂಗ್ ಕಂಟ್ರೀಸ್ ಡೈಲಾಗ್ನಲ್ಲಿ ಬ್ರಿಕ್ಸ್ ಪಾಲುದಾರರು ಸೇರಿದಂತೆ ಒಂಬತ್ತು ಇತರ ರಾಷ್ಟ್ರಗಳ ನಾಯಕರನ್ನು ಭೇಟ್ಯಾಗಲು ನಾನು ಎದುರು ನೋಡುತ್ತೇನೆ" ಪ್ರಧಾನಿ ಹೇಳಿದರು.ಶೃಂಗಸಭೆಯ ಯಲ್ಲಿ ಪಾಲ್ಗೊಳ್ಳುವ ಬಹುತೇಕ ಅಧ್ಯಕ್ಷರನ್ನು ತಾನು ದ್ವಿಪಕ್ಷೀಯವಾಗಿ ಭೇಟಿಯಾಗುತ್ತೇನೆ ಎಂದರು.
ಪ್ರಧಾನಿ ಅವರು ಬ್ರಿಕ್ಸ್ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಾ, ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ವಿಶ್ವ ಶಾಂತಿ ಮತ್ತು ಭದ್ರತೆಯನ್ನು ಎತ್ತಿಹಿಡಿಯುವಲ್ಲಿ ಈ ಶ್ರಂಗಸಭೆ ಪ್ರಮುಖ ಕೊಡುಗೆಗಳನ್ನು ನೀಡಲಿದೆ ಎಂದು ಹೇಳಿದರು.
"ಬ್ರಿಕ್ಸ್ ಗೆ ಭಾರತವು ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಇದು ಪ್ರಗತಿ ಮತ್ತು ಶಾಂತಿಗಾಗಿ ಬ್ರಿಕ್ಸ್ ನ ಮುಂಬರುವ ದ್ವಿತೀಯ ದಶಕದಲ್ಲಿ ತನ್ನ ಪಾಲುದಾರಿಕೆಯನ್ನು ಪ್ರಾರಂಭಿಸಿದೆ" ಎಂದು ಅವರು ಹೇಳಿದರು.
ಇದೇ ಸುಮಾರು ಎರಡು ತಿಂಗಳಿನಿಂದ ಭಾರತದ ಸಿಕ್ಕಿಂ ಗಡಿಯಲ್ಲಿ ಚೀನಾ ಸಮರ ಸಿದ್ದತೆಯಲ್ಲಿ ತೊಡಗಿತ್ತು. ಇದು ಭಾರತ ಚೀನಾ ದ್ವಿಪಕ್ಷೀಯ ಸಂಬಂಧಗಳೈಗೆ ಪ್ರಬಲ ಹೊಡೆತ ನೀಡಿದ್ದು ಇದೀಗ ಚೀನಾದಲ್ಲಿ ನಡೆಯುವ ಬ್ರಿಕ್ಸ್ ರಾಷ್ಟ್ರಗಳ ಶೃಂಗದ ಹಿನ್ನೆಲೆಯಲ್ಲಿ ಚೀನಾ ತನ್ನ ಸೈನಿಕರನ್ನು ಸಿಕ್ಕಿಂ ಗಡಿಯಿಂದ ವಾಪಾಸ್ ಕರೆಸಿಕೊಂಡಿದೆ.
ಮೋದಿ ಅವರ ಚೀನಾ ಭೇಟಿ ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಪುನರ್ ಸ್ಥಾಪಿಸುವಲ್ಲಿ ಯಶಸ್ವಿ ಆಗಿಸುತ್ತದೆ ಎನ್ನುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiಚೀನಾಬ್ರಿಕ್ಸ್ ಶೃಂಗಸಭೆBRICS SummitDoklamBRICS Business CouncilChinaನರೇಂದ್ರ ಮೋದಿಡೋಕ್ಲಾನ್ಬ್ರಿಕ್ಸ್ ಬ್ಯುಸಿನೆಸ್ ಕೌನ್ಸಿಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


