ಗುಜರಾತ್ ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 9 ನವಜಾತ ಶಿಶುಗಳ ಸಾವು!
ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯ ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ಅಂತಹುದೇ ಘಟನೆ ಗುಜರಾತ್ ನ ಮಹಿಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

Published On :
ಅಹ್ಮದಾಬಾದ್: ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯ ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ ಅಂತಹುದೇ ಘಟನೆ ಗುಜರಾತ್ ನ ಮಹಿಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕೇವಲ 24 ಗಂಟೆಗಳ ಅವಧಿಯಲ್ಲಿ ಬರೊಬ್ಬರಿ 9 ನವಜಾತ ಶಿಶುಗಳ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಮಹಿಸಾಗರ ಜಿಲ್ಲೆಯಲ್ಲಿ ನಡೆದಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಈ ಸಾವುಗಳು ಶನಿವಾರ ಸಂಭವಿಸಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಪೈಕಿ ಐದು ಶಿಶುಗಳನ್ನು ಮಹಿಸಾಗರ ಜಿಲ್ಲೆಯ ಲೂನಾವಾಡ ಆಸ್ಪತ್ರೆ, ಸುರೇಂದ್ರನಗರ, ಗಾಂಧಿನಗರ ಜಿಲ್ಲೆಯ ಮನ್ಸಾ, ಅಹ್ಮದಾಬಾದ್ ಜಿಲ್ಲೆಯ ವಿರಾಮಗಾಮ ಹಾಗೂ ಸಬರಕಾಂತ ಜಿಲ್ಲೆ ಹಿಮ್ಮತ್ ನಗರದಿಂದ ಸ್ಥಳಾಂತರಿಸಲಾಗಿತ್ತು. ನಾಲ್ಕು ಮಕ್ಕಳು ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮ ತಾಳಿದ್ದವು.
ಈ ಎಲ್ಲ ಒಂಬತ್ತು ಮಕ್ಕಳೂ ಕಡಿಮೆ ತೂಕದ ಮಕ್ಕಳು ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಎಂ.ಎಂ.ಪ್ರಭಾಕರ್ ಹೇಳಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಶಿಶುಗಳನ್ನು ನಮ್ಮ ಆಸ್ಪತ್ರೆಗೆ ಕಳುಹಿಸಲಾಗಿತ್ತು. ವೈದ್ಯರು ಕೂಡ ಸೂಕ್ತ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಕ್ಕಳು ಸಾವನ್ನಪ್ಪಿವೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಲೂನಾವಾಡದಿಂದ ತಂದ ಒಂದು ಮಗು ಕೇವಲ 1.1 ಕೆ.ಜಿ. ತೂಕ ಹೊಂದಿತ್ತು. 130 ಕಿಲೋಮೀಟರ್ ದೂರದಿಂದ ಆ ಶಿಶುವನ್ನು ತರಲಾಗಿತ್ತು. ವಾಸ್ತವವಾಗಿ ಅಲ್ಲೇ ಪಕ್ಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಿತ್ತಾದರೂ ತೀರಾ ಪರಿಸ್ಥಿತಿ ಕೈಮೀರಿದಾಗ ಈ ಆಸ್ಪತ್ರೆಗೆ ಕಳುಹಿಸುವ ಪ್ರಕರಣಗಳು ಹೊಸದಲ್ಲ ಎಂದು ಅವರು ಸ್ಪಷ್ಟಪಡಿಸಿದರು. ವೈದ್ಯರ ಗೈರಿನಿಂದಾಗಿ ಮಕ್ಕಳು ಮೃತಪಟ್ಟಿವೆ ಎಂಬ ವರದಿಗಳನ್ನು ಅಲ್ಲಗಳೆದ ಅವರು, ಶನಿವಾರ ಎಲ್ಲ ವೈದ್ಯರು ಮತ್ತು ದಾದಿಯರು ಕರ್ತವ್ಯದಲ್ಲಿದ್ದರು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
AhmadabadGujaratಗುಜರಾತ್Government hospitalಸರ್ಕಾರಿ ಆಸ್ಪತ್ರೆಅಹ್ಮದಾಬಾದ್Infants Death Issueಮಕ್ಕಳ ಸರಣಿ ಸಾವು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


