ಐಸಿಎಐ ಅಧ್ಯಕ್ಷ ನಿಲೇಶ್ ವಿಕಾಮ್ಸೆ ಪುತ್ರಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ
ಐಸಿಎಐ ಅಧ್ಯಕ್ಷ ನಿಲೇಶ್ ವಿಕಾಮ್ಸೆ ಅವರ ಪುತ್ರಿ 21 ವರ್ಷದ ಪಲ್ಲವಿ ವಿಕಾಮ್ಸೆ ಅವರ ದೇಹ ಮುಂಬಯಿನ ಉಪನಗರ ರೈಲ್ವೆ ಹಳಿಯ ಮೇಲೆ ...

Published On :
ಮುಂಬಯಿ: ಐಸಿಎಐ ಅಧ್ಯಕ್ಷ ನಿಲೇಶ್ ವಿಕಾಮ್ಸೆ ಅವರ ಪುತ್ರಿ 21 ವರ್ಷದ ಪಲ್ಲವಿ ವಿಕಾಮ್ಸೆ ಅವರ ದೇಹ ಮುಂಬಯಿನ ಉಪನಗರ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ.
ಮುಂಬೈನ ಪರೇಲ್ ಮತ್ತು ಕರ್ರಿ ರೈಲು ನಿಲ್ದಾಣದದಲ್ಲಿ ಪತ್ತೆಯಾಗಿದ್ದ ಮೃತದೇಹವನ್ನು ಅಧ್ಯಕ್ಷ ನಿಲೇಶ್ ವಿಕಾಮ್ಸೆ ಅವರ ಪುತ್ರಿ ಪಲ್ಲವಿ ವಿಕಾಮ್ಸೆ ಎಂದು ಗುರುತಿಸಲಾಗಿದೆ ಎಂದು ಡಿಎನ್ ಎ ವರದಿ ಮಾಡಿದೆ.
ಕಾನೂನು ವಿದ್ಯಾರ್ಥಿಯಾಗಿದ್ದ ಪಲ್ಲವಿ ದಕ್ಷಿಣ ಮುಂಬೈನ ಕಂಪನಿಯೊಂದರಲ್ಲಿ ಇಂಟರ್ನ್ಶಿಪ್ಮಾಡುತ್ತಿದ್ದರು. ಕಚೇರಿಯಿಂದ ಸಂಜೆ 5 ಗಂಟೆಗೆ ಹೊರಟ ಪಲ್ಲವಿ ರಾತ್ರಿ 10.30 ಆದರೂ ಮನೆ ತಲುಪಿರಲಿಲ್ಲ, ಹೀಗಾಗಿ ರಾತ್ರಿ 10.30ಕ್ಕೆ ದೂರು ದಾಖಲಿಸಲಾಗಿತ್ತು.
ಸಂಜೆ 6.30 ರವೇಳೆಗೆ ರೈಲ್ವೆ ಹಳಿ ಮೇಲೆ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆಬಂದ ಪೊಲೀಸರು ಪಲ್ಲವಿ ಎಂದು ಗುರುತಿಸಿದ್ದಾರೆ. ನಂತರ ಪಲ್ಲವಿಯ ಸಂಬಂಧಿಕರೂ ಕೂಡ ಅದನ್ನು ಖಚಿತ ಪಡಿಸಿದ್ದಾರೆ ಎಂದು ರೈಲ್ವೇ ಪೊಲೀಸ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಲ್ಲವಿ ಪೋಷಕರು ಯಾರ ಮೇಲೊ ಸಂಶಯ ವ್ಯಕ್ತ ಪಡಿಸಿಲ್ಲ, ಇದೊಂದು ಆಕಸ್ಮಿಕ ಅವಘಡ ಎಂದು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ರೈಲ್ವೆ ಹಳಿFound Deadಶವ ಪತ್ತೆRailway tracksPallavi VikamseyNilesh VikamseyICAI presidentಪಲ್ಲವಿ ವಿಕಾಮ್ಸೆನಿಲೇಶ್ ವಿಕಾಮ್ಸೆಐಸಿಎಐ ಅಧ್ಯಕ್ಷ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


