ದೇಶ

ಆರ್ಥಿಕ ಸ್ಥಿತಿ ಹದಗೆಟ್ಟಿಲ್ಲ. ಹದಗೆಡಲು ಬಿಡುವುದೂ ಇಲ್ಲ: ಪ್ರಧಾನಿ ಮೋದಿ

ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿಲ್ಲ. ಯಾವುದೇ ಕಾರಣಕ್ಕೂ ಹದಗೆಡಲು ಅವಕಾಶವನ್ನೂ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆರ್ಥಿಕ ಸ್ಥಿತಿ ಹದಗೆಟ್ಟಿಲ್ಲ. ಹದಗೆಡಲು ಬಿಡುವುದೂ ಇಲ್ಲ: ಪ್ರಧಾನಿ ಮೋದಿ
ಸಂಗ್ರಹ ಚಿತ್ರ
Published On :
ನವದೆಹಲಿ: ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿಲ್ಲ. ಯಾವುದೇ ಕಾರಣಕ್ಕೂ ಹದಗೆಡಲು ಅವಕಾಶವನ್ನೂ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಭಾರತೀಯ ಇನ್‌ಸ್ಟಿಟ್ಯೂಟ್‌ ಆಫ್ ಕಂಪನಿ ಸೆಕ್ರೆಟರೀಸ್‌ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ನೋಟು ನಿಷೇಧದಿಂದ ಅನಾಹುತವೇ  ಆಗಿಹೋಯಿತೇನೋ ಎನ್ನುವಂತೆ ವಿಪಕ್ಷಗಳು ಬಿಂಬಿಸುತ್ತಿವೆ. ಆದರೆ ನೋಟು ನಿಷೇಧದ ಬಳಿಕ ಜಿಡಿಪಿ ಶೇ.7ಕ್ಕೆ ಏರಿಕೆಯಾಗಿತ್ತು. ಬಳಿಕ ಉತ್ಪಾದನಾ ಕ್ಷೇತ್ರದ ಕುಂಠಿತ ಪ್ರಕ್ರಿಯಿಯಿಂದಾಗಿ ಅಲ್ಪ ಪ್ರಮಾಣದ ಕುಸಿತ ಕಂಡಿದೆ.  ತ್ತೈಮಾಸಿಕ ವರದಿಯಂತೆ ದೇಶಿಯ ಉತ್ಪನ್ನ ಕ್ಷೇತ್ರದಲ್ಲಿ ಕುಸಿತ ಆಗಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆರ್ಥಿಕಾಭಿವೃದ್ಧಿ ಹಾಗೂ ಬಂಡವಾಳ ಹೂಡಿಕೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ  ಎಂದು ಹೇಳಿದರು.

ಇದೇ ವೇಳೆ ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ ಜಿಡಿಪಿ ದತ್ತಾಂಶವನ್ನು ಹೋಲಿಕೆ ಮಾಡಿದ ಪ್ರಧಾನಿ ಮೋದಿ, "ಕೆಲವರಿಗೆ ನಮ್ಮ ಬಗ್ಗೆ ನಿರಾಶೆ ವ್ಯಕ್ತಪಡಿಸದೇ ಇದ್ದರೆ ನಿದ್ದೆಯೇ ಬರುವುದಿಲ್ಲ. ಅಂಥವರನ್ನು ನಾವು  ಗುರುತಿಸಬೇಕು. ಅಷ್ಟಕ್ಕೂ ಜಿಡಿಪಿ ಕುಸಿತ ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಕುಸಿತ ಕಂಡಿದೆ. ಯುಪಿಎ ಸರ್ಕಾರದ ಕಾಲಾವಧಿಯಲ್ಲಿ, ಎಂಟು ಬಾರಿ ಜಿಡಿಪಿ ಕುಸಿತ ಕಂಡಿತ್ತು. ಶೇ.5.7ಕ್ಕೆ ಕುಸಿದು  ಬಿದ್ದಿರುವುದನ್ನೂ ನೋಡಿದ್ದೇವೆ. ಆದರೆ ಕಳೆದ ಎರಡು ತ್ತೈಮಾಸಿಕ ವರದಿಯಲ್ಲಿನ ಕುಸಿತದ ಬಗ್ಗೆ ಕೆಲವರು ಖುಷಿಪಟ್ಟು, ಟೀಕಿಸುತ್ತಿದ್ದಾರೆ. ಆದರೆ ಅಂದು ಬಿಜೆಪಿ ಸರ್ಕಾರ ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯುಪಿಎ  ಅವಧಿಯಲ್ಲೇ ಅಲ್ಲವೆ ಶೇ.10 ರಷ್ಟು ಹಣದುಬ್ಬರ ಇಳಿಕೆಯಾಗಿದ್ದು. ಆದರೆ ಈಗ ಏಪ್ರಿಲ್‌-ಜೂನ್‌ ನ ಬೆಳವಣಿಗೆ ಶೇ.5.7ಕ್ಕಿಂತ ಕೆಳಕ್ಕೆ ಕುಸಿದು ಪ್ರಳಯವೇ ಆಗಿಹೋಯಿತೇನೋ ಎನ್ನುವಂತೆ ಮಾತನಾಡುತ್ತಿದ್ದಾರೆ ಎಂದು  ನೇರವಾಗಿ ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡಿಕಾರಿದರು.

ಯಶವಂತ ಸಿನ್ಹಾಗೂ ತಿರುಗೇಟು
ಇದೇ ಸಂದರ್ಭದಲ್ಲಿ ತಮ್ಮದೇ ಪಕ್ಷದ ಹಿರಿಯ ನಾಯಕ ಯಶವಂತ್‌ ಸಿನ್ಹಾ ಹೇಳಿಕೆಗೂ ತಿರುಗೇಟು ನೀಡಿದ ಪ್ರಧಾನಿ ಮೋದಿ, 'ಸರ್ಕಾರ ಆರ್ಥಿಕ ಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಸೂಕ್ತ ಕ್ರಮವನ್ನೂ  ತೆಗೆದುಕೊಳ್ಳಲಿದ್ದೇವೆ. ಅಂತೆಯೇ ಜಿಎಸ್‌ ಟಿ ಲೋಪ ಸರಿಪಡಿಸುತ್ತೇವೆ ಮತ್ತು ಜಿಎಸ್‌ಟಿ ಜಾರಿಯಾದ ಬಳಿಕ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಕ್ಷೇತ್ರಗಳು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳು ಹಾಗೂ ಅಡಚಣೆಗಳನ್ನು  ಜಿಎಸ್‌ಟಿ ಕೌನ್ಸಿಲ್‌ ಗುರುತಿಸಿಕೊಳ್ಳುತ್ತಿದೆ. ಈ ಬಗ್ಗೆ ನಿರ್ದೇಶನ ನೀಡಲಾಗಿದ್ದು, ಶೀಘ್ರವೇ ಪರಿಹಾರ ಕಂಡುಕೊಳ್ಳಲು ಸರ್ಕಾರ ಬದ್ಧವಾಗಿದೆ. ಹೀಗಾಗಿ ಯಾವುದೇ ಕ್ಷೇತ್ರದ ಉದ್ಯಮಿಗಳೂ ಆತಂಕಪಡಬೇಕಿಲ್ಲ. ಅಲ್ಲದೆ ಶಂಕಿತ ಶೆಲ್‌  ಕಂಪನಿಗಳನ್ನು ಪತ್ತೆ ಮಾಡಲಾಗಿದ್ದು, ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ  ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.