ಇಡೀ ಕಾಂಗ್ರೆಸ್ ನಾಯಕತ್ವ ಜಾಮೀನಿನ ಮೇಲೆ ಹೊರಗಿದೆ: ಪ್ರಧಾನಿ ನರೇಂದ್ರ ಮೋದಿ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಆರೋಪದಡಿ ಜಾಮೀನಿ...

Published On :
ಬಿಲಾಸ್ಪುರ್: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಆರೋಪದಡಿ ಜಾಮೀನಿನ ಮೇಲೆ ಹೊರಬಂದಿದ್ದು, ಹಿಮಾಚಲ ಪ್ರದೇಶದಲ್ಲಿ ವೀರಭದ್ರ ಸಿಂಗ್ ಸರ್ಕಾರ ಕೂಡ ಜಾಮೀನು ಸಿಕ್ಕಿ ಬಚಾವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಅವರು ಇಂದು ಹಿಮಾಚಲ ಪ್ರದೇಶ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಅನೇಕ ಭ್ರಷ್ಟಾಚಾರ ಆರೋಪಗಳನ್ನು ಎದುರಿಸಿದರೂ ಕೂಡ ಕಾಂಗ್ರೆಸ್ ನ ಪ್ರಮುಖ ನಾಯಕರು ಇಂದು ಜಾಮೀನು ಸಿಕ್ಕಿ ಬಜಾವಾಗಿದ್ದಾರೆ ಎಂದ ಅವರು ವೀರಭದ್ರ ಸಿಂಗ್ ಸಂಪುಟವನ್ನು ಜಾಮೀನು ಪಡೆದಿರುವ ಸರ್ಕಾರ ಎಂದು ಬಣ್ಣಿಸಿದರು.
ಇದು ಜಾಮೀನಿನ ಸರ್ಕಾರ. ಕಾಂಗ್ರೆಸ್ ನ ಕೆಲವರು ನನ್ನನ್ನು ಭೇಟಿ ಮಾಡಲು ಬಂದಾಗ, ಮುಖ್ಯಮಂತ್ರಿ ಮತ್ತವರ ಇಡೀ ಕುಟುಂಬ ಜಾಮೀನು ಪಡೆದು ಹೊರಬಂದವರು. ಯಾಕೆ ನೀವು ಮುಖ್ಯಮಂತ್ರಿಯನ್ನು ಬದಲಾಯಿಸಬಾರದು ಎಂದು ಕೇಳಿದೆ. ಅದಕ್ಕವರು, ನಮ್ಮ ಇಡೀ ಪಕ್ಷವೇ ಜಾಮೀನಿನ ಮೇಲೆ ಹೊರಬಂದಿದೆ. ನಮ್ಮ ಅಧ್ಯಕ್ಷೆ ಕೂಡ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ ಎಂದರು ಎಂದು ಪ್ರಧಾನಿ ವ್ಯಂಗ್ಯವಾಗಿ ನುಡಿದರು. ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿದ್ದ ವೀರಭದ್ರ ಸಿಂಗ್ ಜಾಮೀನು ಮೇಲೆ ಹೊರಬಂದಿದ್ದಾರೆ.
ಸೋನಿಯಾ ಗಾಂಧಿಯವರು ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಜಾಮೀನು ಪಡೆದಿದ್ದಾರೆ.
ಯುವರಾಜ ರಾಹುಲ್ ಗಾಂಧಿ ಕೂಡ ಆ ಕೇಸಿನಲ್ಲಿ ಹೊರಬಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಂದು ಕೇಸು ಜಾಮೀನು ಮೇಲೆ ನಿಂತಿದೆ. ಅದರ ನಾಯಕರು, ಸರ್ಕಾರ ಜಾಮೀನಿನ ಮೇಲೆ ಹೊರಬರುತ್ತಾರೆ. ಈಗ ಹೇಳಿ, ನಾವು ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಡವೇ? ಎಂದು ನೆರೆದಿದ್ದ ಜನ ಸಮೂಹವನ್ನು ಪ್ರಶ್ನಿಸಿದರು. ಆಗ ಜಮಾಯಿಸಿದ್ದ ಜನತೆ ಜೈ ಶ್ರೀ ರಾಮ್ ಎಂದು ಕೂಗಿದರು.
2014ರಿಂದ ಮುಂಚೆ ಮಾಧ್ಯಮಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸುದ್ದಿಗಳೇ ಹೆಚ್ಚಾಗಿದ್ದವು. ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರದ ಯಾವುದೇ ಕಲೆ ಇಲ್ಲ ಎಂದು ಹೇಳಿದರು.
ತಮ್ಮ 40 ನಿಮಿಷಗಳ ಭಾಷಣದಲ್ಲಿ ಮೋದಿಯವರು ಭಾರತೀಯ ಸೇನಾ ಯೋಧರ ಒಂದು ಶ್ರೇಣಿ, ಒಂದು ಪಿಂಚಣಿ ಬಗ್ಗೆಯೂ ಪ್ರಸ್ತಾಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


