ಮಧ್ಯ ರಾತ್ರಿ ನಟ ಪರೇಶ್ ರಾವಲ್ ಟ್ವಿಟರ್ ಹೈಡ್ರಾಮಾ, ರಾಹುಲ್ ಕುರಿತು ಟ್ವೀಟ್ ಮಾಡಿ ಬಳಿಕ ಕ್ಷಮೆ!
ಬಿಜೆಪಿ ಮುಖಂಡ ಹಾಗೂ ಖ್ಯಾತ ಬಾಲಿವುಡ್ ನಟ ಪರೇಶ್ ರಾವಲ್ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತೆಗಳುವ ಭರದಲ್ಲಿ ಯಟವಟ್ಟು ಮಾಡಿಕೊಂಡು ಬಳಿಕ ಕ್ಷಮೆ ಯಾಚಿಸಿದ್ದಾರೆ.

Published On :
ಮುಂಬೈ: ಬಿಜೆಪಿ ಮುಖಂಡ ಹಾಗೂ ಖ್ಯಾತ ಬಾಲಿವುಡ್ ನಟ ಪರೇಶ್ ರಾವಲ್ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ತೆಗಳುವ ಭರದಲ್ಲಿ ಯಟವಟ್ಟು ಮಾಡಿಕೊಂಡು ಬಳಿಕ ಕ್ಷಮೆ ಯಾಚಿಸಿದ್ದಾರೆ.
ಮಧ್ಯರಾತ್ರಿ ಕಾಂಗ್ರೆಸ್ ಪಕ್ಷದ ಮ್ಯಾಗಜಿನ್ ಯುವ ದೇಶ್ ನಲ್ಲಿ ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ತೆರೆಸಾ ಮೇ ಅವರ ಚಿತ್ರವನ್ನು ಪ್ರಕಟಿಸಿ, ನಮ್ಮ ಪ್ರಧಾನಿ ಟೀ ಕೊಡುವುದಕ್ಕೇ ಸೀಮಿತವಾಗಬಾರದು ಎಂದು ವ್ಯಂಗ್ಯಾತ್ಮಕವಾಗಿ ಚಿತ್ರ ಪ್ರಕಟಿಸಿತ್ತು.. ಇದನ್ನು ಟೀಕಿಸುವ ಭರದಲ್ಲಿ ನಟ ಪರೇಶ್ ರಾವಲ್ ನಮ್ಮ ಚಾಯ್ ವಾಲಾ ಪ್ರವಾಸಿ "ಬಾರ್ ವಾಲಾ"ಗಿಂತ ತುಂಬಾ ಉತ್ತಮ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷದಿಂದ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪರೇಶ್ ರಾವಲ್ ಆ ವಿವಾದಾತ್ಮಕ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಅಲ್ಲದೆ ಭಾವನೆಗಳ ನೋಯಿಸಿದ್ದಕ್ಕೆ ಕ್ಷಮೆ ಕೋರುತ್ತಿದ್ದೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


