ತಾಜ್ ಮಹಲ್ ಒಂದೇ, ಅದನ್ನು ಮತ್ತೆ ನಿರ್ಮಿಸಲಾಗದು: ಯೋಗಿ ಸರ್ಕಾರಕ್ಕೆ 'ಸುಪ್ರೀಂ' ಚಾಟಿ
ತಾಜ್ ಮಹಲ್ ಸಂಬಂಧ ಉತ್ತರ ಪ್ರದೇಶ ಸರ್ಕಾರವನ್ನು ಸೋಮವಾರ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಒಂದೇ ತಾಜ್ ಮಹಲ್ ಇರುವುದು; ನೀವು ಮತ್ತೆ ಅದನ್ನು ಪಡೆಯಲಾಗದು ಎಂದು ಸಿಎಂ ಯೋಗಿ ಸರ್ಕಾರಕ್ಕೆ ಚಾಟಿ ಬೀಸಿದೆ.

Published On :
ನವದೆಹಲಿ: ತಾಜ್ ಮಹಲ್ ಸಂಬಂಧ ಉತ್ತರ ಪ್ರದೇಶ ಸರ್ಕಾರವನ್ನು ಸೋಮವಾರ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಒಂದೇ ತಾಜ್ ಮಹಲ್ ಇರುವುದು; ನೀವು ಮತ್ತೆ ಅದನ್ನು ಪಡೆಯಲಾಗದು ಎಂದು ಸಿಎಂ ಯೋಗಿ ಸರ್ಕಾರಕ್ಕೆ ಚಾಟಿ ಬೀಸಿದೆ.
ತಾಜ್ ಮಹಲ್ ಬಳಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದ ಉತ್ತರ ಪ್ರದೇಶ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿಶ್ವ ವಿಖ್ಯಾತ ಮತ್ತು ವಿಶ್ವದ ಅದ್ಬುತ ನಿರ್ಮಾಣಗಳಶಲ್ಲಿ ಒಂದಾಗಿರುವ ತಾಜ್ ಮಹಲ್ ರಕ್ಷಣೆಗೆ ಸರ್ಕಾರ ಯಾವುದೇ ರೀತಿಯ ದೂರದೃಷ್ಟಿ ಹೊಂದಿಲ್ಲ ಎಂದು ಕಾಣುತ್ತದೆ ಎಂದು ಕಿಡಿಕಾರಿದೆ. ವಿಶ್ವದ ಅದ್ಬುತ ನಿರ್ಮಾಣಗಳಲ್ಲಿ ಒಂದಾಗಿರುವ ತಾಜ್ ಮಹಲ್ ರಕ್ಷಣೆ ಸರ್ಕಾರದ ಆದ್ಯ ಕರ್ತವ್ಯ..ಒಮ್ಮೆ ತಾಜ್ ಮಹಲ್ ನಿರ್ನಾಮವಾದರೆ ಅದನ್ನು ಮತ್ತೆ ನಿರ್ಮಿಸಲು ಅಸಾಧ್ಯ.. ಇರುವುದು ಒಂದೇ ತಾಜ್ ಮಹಲ್ ಎಂದು ಹೇಳಿದೆ.
ಅಂತೆಯೇ ತಾಜ್ ಮಹಲ್ ರಕ್ಷಣೆಗೆ ರಾಜ್ಯ ಸರ್ಕಾರ ಮಹತ್ವ ನೀಡಿದಂತಿಲ್ಲ. ನಗರದಲ್ಲಿ ಕಸ ನಿರ್ವಹಣೆ ಸರಿಯಾಗಿಲ್ಲ, ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಐತಿಹಾಸಿಕ ಕಟ್ಟಡಕ್ಕೆ ಹಾನಿಯಾಗುತ್ತದೆ. ತಾಜ್ ಟ್ರೆಪೆಜಿಯಮ್ ವಲಯ ಟಿಟಿಜೆಡ್ ನಿಂದ ವರದಿ ಕೈ ಸೇರಿದ ಬಳಿಕ ತಾಜ್ ಮಹಲ್ ಬಳಿ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣದ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂತೆಯೇ ಸ್ಥಳೀಯ ನಿವಾಸಿಗಳಿಗೆ ಹೊರತು ಪಡಿಸಿ ಅನ್ಯರಿಗೆ ಮತ್ತು ಪ್ರವಾಸಿಗರ ವಾಹನಗಳಿಗೆ ತಾಜ್ ಮಹಲ್ ಪ್ರಾಂತ್ಯದಲ್ಲಿ ಪ್ರವೇಶವಿಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtನವದೆಹಲಿNew Delhiಸುಪ್ರೀಂ ಕೋರ್ಟ್Uttar pradeshಉತ್ತರ ಪ್ರದೇಶTaj Mahalತಾಜ್ ಮಹಲ್CM Yogi Adityanathಸಿಎಂ ಯೋಗಿ ಆದಿತ್ಯಾನಾಥ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


