ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಆಗಿದ್ದೂ ಮೋದಿಯಿಂದಾಗಿ: ಶಿವ ಸೇನೆ ವ್ಯಂಗ್ಯ
ಬಿಜೆಪಿಯನ್ನು ಮತ್ತೊಮ್ಮೆ ಟೀಕಿಸಿರುವ ಶಿವಸೇನೆ ಮಾನುಷಿ ಚಿಲ್ಲರ್ ವಿಶ್ವ ಸುಂದರಿ ....

Published On :
ಮುಂಬೈ: ಬಿಜೆಪಿಯನ್ನು ಮತ್ತೊಮ್ಮೆ ಟೀಕಿಸಿರುವ ಶಿವಸೇನೆ ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಪ್ರಶಸ್ತಿ ಗೆದ್ದಿರುವುದು ತಮ್ಮಿಂದಾಗಿ ಎಂದು ಏಕೆ ಯಾವೊಬ್ಬ ಬಿಜೆಪಿ ನಾಯಕರು ಹೇಳುತ್ತಿಲ್ಲ ಎಂದು ವ್ಯಂಗ್ಯವಾಗಿ ಕೇಳಿದೆ.
17 ವರ್ಷಗಳ ನಂತರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದು ಹರ್ಯಾಣ ಮೂಲದ ಮಾನುಷಿ ಚಿಲ್ಲರ್ ದೇಶಕ್ಕೆ ಕೀರ್ತಿ ತಂದಿದ್ದಾರೆ. ದೇವರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದ ಬಿಜೆಪಿಯ ನಾಯಕರಾದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಂದ ಸಾಧ್ಯವಾಯಿತು ಎಂದು ವ್ಯಂಗ್ಯವಾಗಿ ಅದರ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದೆ.
ಆದರೆ ಇದುವರೆಗೆ ಬಿಜೆಪಿಯ ಯಾವೊಬ್ಬ ನಾಯಕರು ಕೂಡ ತಮ್ಮಿಂದಾಗಿ ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಪಟ್ಟ ಪಡೆದುಕೊಂಡಳು ಎಂದು ಹೇಳದಿರುವುದು, ಅದರ ಕ್ರೆಡಿಟ್ ಪಡೆದುಕೊಳ್ಳಲು ಮುಂದೆ ಬಾರದಿರುವುದು ಆಶ್ಚರ್ಯವೇ ಸರಿ ಎಂದು ಅಣಕಿಸಿದೆ.
ಮಾನುಷಿ ಉಪನಾಮ ಚಿಲ್ಲರ್ ಎಂದಿದೆ. ಹಾಗಾಗಿ ಇದು ಮೋದಿಯವರ ನೋಟುಗಳ ಅನಾಣ್ಯೀಕರಣ ನೀತಿಯಿಂದಾಗಿ ಗೆದ್ದಿದ್ದಾರೆ. 500, 1000 ರೂಪಾಯಿ ನೋಟುಗಳ ಚಲಾವಣೆಯನ್ನು ನಿಷೇಧಿಸಿದ ನಂತರ ಜನರ ಬಳಿಯಲ್ಲಿ ಚಿಲ್ಲರೆ ಮಾತ್ರ ಉಳಿದಿದೆ. ಹೀಗಾಗಿ ಮಾನುಷಿ ವಿಶ್ವ ಸುಂದರಿಯಾಗಿ ಗೆದ್ದಿದ್ದಾರೆ ಎಂದು ವ್ಯಂಗ್ಯವಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿಶಿವಸೇನೆbjpಬಿಜೆಪಿmiss worldManushi ChhillarShiva Seneಮಾನುಷಿ ಚಿಲ್ಲರ್ವಿಶ್ವ ಸುಂದರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


