ಶರಣಾದ ಉಗ್ರ ಬದಲಾದರೆ ಸಾಕು, ಭದ್ರತಾ ಪಡೆಗಳು ಆತನಿಗೆ ಹಿಂಸೆ ನೀಡುವುದಿಲ್ಲ: ಸೇನಾಧಿಕಾರಿ
ತಾಯಿಯ ಕಣ್ಣೀರಿಗೆ ಸೋತು ಉಗ್ರ ಸಂಘಟನೆ ತೊರೆದು ಶರಣಾಗಿರುವ ಉಗ್ರ ಮಜೀದ್ ಇರ್ಶಾದ್ ಖಾನ್ ಬದಲಾದರೆ ಸಾಕು, ವಿಚಾರಣೆ ಹೆಸರಲ್ಲಿ ಆತನಿಗೆ ತೊಂದರೆ ನೀಡುವುದಿಲ್ಲ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

Published On :
ಶ್ರೀನಗರ: ತಾಯಿಯ ಕಣ್ಣೀರಿಗೆ ಸೋತು ಉಗ್ರ ಸಂಘಟನೆ ತೊರೆದು ಶರಣಾಗಿರುವ ಉಗ್ರ ಮಜೀದ್ ಇರ್ಶಾದ್ ಖಾನ್ ಬದಲಾದರೆ ಸಾಕು, ವಿಚಾರಣೆ ಹೆಸರಲ್ಲಿ ಆತನಿಗೆ ತೊಂದರೆ ನೀಡುವುದಿಲ್ಲ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸೇನೆಗೆ ಶರಣಾದ ಉಗ್ರ ಹಾಗೂ 20 ವರ್ಷದ ಕಾಶ್ಮೀರಿ ಫುಟ್ಬಾಲ್ ಆಟಗಾರ ಮಜೀದ್ ಇರ್ಶಾದ್ ಖಾನ್ ಸಮೇತರಾಗಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಶ್ಮೀರ ಪೊಲೀಸರು ಹಾಗೂ ಸೇನಾಧಿಕಾರಿಗಳು ಮಜೀದ್ ಇರ್ಶಾದ್ ಖಾನ್ ಬದಲಾಗಬೇಕು. ಆ ಮೂಲಕ ಆತ ಇತರೆ ಉಗ್ರರಿಗೆ ಮಾದರಿಯಾಗಬೇಕು. ಆತನಿಗೆ ಸೇನೆಯಾಗಲೀ ಅಥವಾ ತನಿಖಾಧಿಕಾರಿಗಳಾಗಲಿ ವಿಚಾರಣೆ ಹೆಸರಲ್ಲಿ ತೊಂದರೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜನರಲ್ ಕಮಾಂಡಿಂಗ್ ಆಫಿಸರ್ ಮೇಜರ್ ಜನರಲ್ ಬಿಎಸ್ ರಾಜು ಅವರು, ಶರಣಾದ ಮಜೀದ್ ಇರ್ಶಾದ್ ಖಾನ್ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಮಜೀದ್ ತಾಯಿ ಮೇಲಿನ ಪ್ರೀತಿ ಹಾಗೂ ಸೇನೆ ಮೇಲೆ ನಂಬಿಕೆ ಇಟ್ಟು ಶರಣಾಗಿದ್ದಾನೆ ಆತನ ರಕ್ಷಣೆ ನಮಗೆ ಮುಖ್ಯ. ನಿಜ ಹೇಳಬೇಕು ಎಂದರೆ ಆತ ತುಂಬಾ ಧೈರ್ಯ ನಿರ್ಧಾರ ಕೈಗೊಂಡಿದ್ದಾನೆ. ಕಾಶ್ಮೀರದಲ್ಲಿ ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಉಗ್ರರ ಮೋಸಕ್ಕೆ ಬಲಿಯಾದ ಇನ್ನೂ ಸಾಕಷ್ಟು ಯುವಕರು ಉಗ್ರತ್ವವನ್ನು ತೊರೆದು ಅದರಿಂದ ಹೊರಬರಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಅನಂತನಾಗ್ ನಲ್ಲಿ ಸೇನೆಯ ಗುಂಡಿಗೆ ಬಲಿಯಾದ ತನ್ನ ಸ್ನೇಹಿತ ಯವಾರ್ ನಿಸ್ಸರ್ ಶೆರ್ಗುರ್ಜಿ ಅಂತ್ಯಕ್ರಿಯೆಯ ಬಳಿಕ ಮಜೀದ್ ಇರ್ಶಾದ್ ಖಾನ್ ಎಲ್ಇಟಿಗೆ ಸೇರುವ ನಿರ್ಧಾರ ತೆಗೆದುಕೊಂಡಿದ್ದ. ಅಂತೆಯೇ ಎಲ್ ಇಟಿ ಸಂಘಟನೆ ಸೇರುವುದಾಗಿ ಅಕ್ಟೋಬರ್ 29ರಂದು ಫೇಸ್ ಬುಕ್ ಮೂಲಕ ಸೂಚನೆ ನೀಡಿ ಖಾನ್ ನಾಪತ್ತೆಯಾಗಿದ್ದ. ಖಾನ್ ನಾಪತ್ತೆ ಬಳಿಕ ಆತ ಉಗ್ರ ಸಂಘಟನೆ ಸೇರಿದ್ದಾನೆ ಎಂದು ತಿಳಿದು ತಾಯಿ ಕಣ್ಣೀರು ಹಾಕಿದ್ದರಂತೆ. ಈ ವಿಡಿಯೋ ಕಾಶ್ಮೀರದಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ನೋಡಿದ ಮಜೀದ್ ಇರ್ಶಾದ್ ಖಾನ್ ಕೊನೆಗೂ ತಾಯಿ ಕಣ್ಣೀರಿಗೆ ಸೋತು ಉಗ್ರ ಸಂಘಟನೆ ತೊರೆದು ಪೊಲೀಸರಿಗೆ ಶರಣಾಗಿದ್ದಾನೆ.\
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಶ್ರೀನಗರSrinagarಜಮ್ಮು ಮತ್ತು ಕಾಶ್ಮೀರJammu and KashmirViral Newsವೈರಲ್ ಸುದ್ದಿKashmir Footballerಕಾಶ್ಮೀರ ಫುಟ್ಬಾಲಿಗ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


