ದೇಶ

ಮುಂಬೈ: ಮತಾಂತರಗೊಳ್ಳುವಂತೆ ಮಾಜಿ ಮಾಡೆಲ್'ಗೆ ಪತಿ ಚಿತ್ರಹಿಂಸೆ; ಮತ್ತೊಬ್ಬಳೊಂದಿಗೆ ವಿವಾಹ!

ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಗಳು ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಮುಂಬೈ ನಲ್ಲೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಮಾಜಿ ಮಾಡೆಲ್ ಒಬ್ಬರಿಗೆ ಮತಾಂತರಗೊಳ್ಳುವಂತೆ ಪತಿ ಚಿತ್ರಹಿಂಸೆ ನೀಡುತ್ತಿದ್ದಾರೆಂಬ ಆರೋಪಗಳು...

ಮುಂಬೈ: ಮತಾಂತರಗೊಳ್ಳುವಂತೆ ಮಾಜಿ ಮಾಡೆಲ್'ಗೆ ಪತಿ ಚಿತ್ರಹಿಂಸೆ; ಮತ್ತೊಬ್ಬಳೊಂದಿಗೆ ವಿವಾಹ!
ಸಾಂದರ್ಭಿಕ ಚಿತ್ರ
Published On :
ಮುಂಬೈ: ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಗಳು ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಮುಂಬೈ ನಲ್ಲೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಮಾಜಿ ಮಾಡೆಲ್ ಒಬ್ಬರಿಗೆ ಮತಾಂತರಗೊಳ್ಳುವಂತೆ ಪತಿ ಚಿತ್ರಹಿಂಸೆ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿದೆ. 
ಮಾಜಿ ಮಾಡೆಲ್ ರಶ್ಮಿ ಶಹಬಾಜ್'ಕರ್ (42)ಗೆ ಆವರ ಪತಿ ಚಿತ್ರ ಹಿಂಸೆ ನೀಡುತ್ತಿದ್ದಾರೆಂದು ಹೇಳಿ ಬಾಂದ್ರಾ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ ಎಂದು ತಿಳಿದುಬಂದಿದೆ. 
ನಾನು ಹುಟ್ಟಿನಿಂದಲೂ ಹಿಂದೂ ಧರ್ಮದವಳಾಗಿದ್ದು, ನನ್ನ ಪತಿ ಆಸೀಫ್ ಮತಾಂತರಗೊಳ್ಳುವಂತೆ ಜೀವ ಬೆದರಿಕೆ ಹಾಗೂ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದಾರೆಂದು ರಶ್ಮಿ ಅವರು ಹೇಳಿಕೊಂಡಿದ್ದಾರೆ. 
ನನ್ನ ಪತಿ ಇದೀಗ ಮತ್ತೊಂದು ವಿವಾಹವಾಗಿದ್ದು, ಆಕೆ ಆಸೀಫ್ ಗಿಂತ ಅರ್ಧದಷ್ಟು ಸಣ್ಣ ವಯಸ್ಸಿನವಳಾಗಿದ್ದು, ಹಿಂದೂ ಧರ್ಮದಳಾಗಿದ್ದಾಳೆ. ಮತ್ತೊಂದು ವಿವಾಹವಾಗಿರುವ ಆಸೀಫ್ ಇದೀಗ ನನ್ನನ್ನು ಮನೆಯಿಂದ ಹೊರಹಾಕಲು ಯತ್ನಿಸುತ್ತಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.