ಗುಜರಾತ್: ಚುನಾವಣಾ ಜಾಹೀರಾತಿನಲ್ಲಿ 'ಪಪ್ಪು' ಪದ ಬಳಸದಂತೆ ಬಿಜೆಪಿಗೆ ಚುನಾವಣಾ ಆಯೋಗ ತಾಕೀತು
ಜರಾತ್ ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ. ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Published On :
ಅಹಮದಾಬಾದ್: ಗುಜರಾತ್ ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ. ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಚುನಾವಣಾ ಆಯೋಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ 'ಪಪ್ಪು' ಎಂದು ಟೀಕಿಸದಂತೆ, ಆ ಪದವನ್ನು ಚುನಾವಣಾ ಜಾಹೀರಾತಿನಲ್ಲಿ ಬಳಸದಂತೆ ಆದೇಶ ನೀಡಿದೆ.
'ಪಪ್ಪು' ಪದವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಟೀಕಿಸಲು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದೇ ವೇಳೆ ರಾಹುಲ್ ಅವರನ್ನು ಪಪ್ಪು ಎಂದು ಉಲ್ಲೇಖಿಸಿರುವ ಜಾಹೀರಾತನ್ನು ಬಿಡುಗಡೆಗೊಳಿಸಲು ಬಿಜೆಪಿ ಆಯೋಗದ ಬಳಿ ಅನುಮತಿ ಕೇಳಿತ್ತು. ಆದರೆ ಆಯೋಗ ಜಾಹೀರಾತಿನಲ್ಲಿರುವ ಪಪ್ಪು ಪದವನ್ನು ತೆಗೆದುಹಾಕಿ, ಇಲ್ಲವೆ ಜಾಹೀರಾತನ್ನು ಸ್ಥಗಿತಗೊಳಿಸಿ ಎಂದು ಆದೇಶ ನೀಡಿದೆ.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಜಾಹೀರಾತು ಬಿಡುಗಡೆಗೂ ಮುನ್ನ ಚುನಾವಣಾ ಆಯೋಗದ ಪರಿಶೀಲನೆಗೆ ಒಪ್ಪಿಸಬೇಕು.ಆಯೋಗದ ಒಪ್ಪಿಗೆ ಪಡೆದ ಬಳಿಕವೇ ಜಾಹೀರಾತನ್ನು ಬಿಡುಗಡೆ ಮಾಡಬೇಕು. ಬಿಜೆಪಿ ಬಿಡುಗಡೆ ಮಾಡಲುದ್ದೇಶಿಸಿದ ಜಾಹೀರಾತಿನಲ್ಲಿರುವ 'ಪಪ್ಪು' ಪದ ಅವಹೇಳನಕಾರಿಯಾಗಿದೆ ಎಂದುುಲ್ಲೇಖಿಸಿದ ಆಯೋಗ ಆ ಪದಕ್ಕೆ ಕತ್ತರಿ ಹಾಕುವಂತೆ ಸೂಚಿಸಿದೆ. ಇದರ ಪ್ರಕಾರ ಬಿಜೆಪಿ ಪಕ್ಷ ಜಾಹೀರಾತಿನಲ್ಲಿದ್ದ ಆ ಪದವನ್ನು ತೆಗೆದು ಹಾಕುವುದಾಗಿ ಒಪ್ಪಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿGujaratಗುಜರಾತ್Election Commissionಚುನಾವಣಾ ಆಯೋಗPappuಪಪ್ಪುCongress vice president Rahul Gandhiಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


