ಚೀನಾದಲ್ಲಿನ ಭ್ರಷ್ಟಾಚಾರ ಸೋವಿಯತ್ ಮಾದರಿಯ ಪತನಕ್ಕೆ ದಾರಿ!
ಚೀನಾ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲೇಬೇಕಿದೆ. ಇಲ್ಲವಾದರೆ ಸೋವಿಯತ್ ಮಾದರಿಯ ಪತನವನ್ನು ಎದುರಿಸಬೇಕಾಗುತ್ತದೆ ಎಂದು ದೇಶದ ಎರಡನೇ ಅತಿ ದೊಡ್ಡ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎಚ್ಚರಿಕೆ ನೀಡಿದೆ.

Published On :
ಬೀಜಿಂಗ್: ಚೀನಾ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲೇಬೇಕಿದೆ. ಇಲ್ಲವಾದರೆ ಸೋವಿಯತ್ ಮಾದರಿಯ ಪತನವನ್ನು ಎದುರಿಸಬೇಕಾಗುತ್ತದೆ ಎಂದು ದೇಶದ ಎರಡನೇ ಅತಿ ದೊಡ್ಡ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಎಚ್ಚರಿಕೆ ನೀಡಿದೆ.
ಶಿಸ್ತು ಪರಿಶೀಲನೆಗಾಗಿ ಇರುವ ಕೇಂದ್ರ ಆಯೋಗದ ಕಾರ್ಯದರ್ಶಿ ಯಂಗ್ ಕ್ಸಿಯಾಡು, ಒಂದು ವೇಳೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವಲ್ಲಿ ವಿಫಲವಾದರೆ ಚೀನಾ ಸಹ ಸೋವಿಯತ್ ಮಾದರಿಯ ಪತನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಹಿಂದಿನ ಸರ್ಕಾರಗಳ ಆಡಳಿತವನ್ನು ಕಟುವಾಗಿ ಟೀಕಿಸಿರುವ ಯಂಗ್ ಕ್ಸಿಯಾಡು, ಪೀಪಲ್ಸ್ ಪಾರ್ಟಿ ಪತ್ರಿಕೆಯ ಸಂಪಾದಕೀಯದಲ್ಲಿ ಲೇಖನ ಬರೆದಿದ್ದು, ಪಕ್ಷದ ಭವಿಷ್ಯ ಹಾಗೂ ದೇಶದ ಜನತೆಯ ಭವಿಷ್ಯ ಎರಡೂ ಸೋವಿಯತ್ ಮಾದರಿಯ ಪತನದ ಹಾದಿಯಲ್ಲೇ ಸಾಗಲಿದೆ ಎಂದು ಹೇಳಿದ್ದಾರೆ.
ಚೀನಾದ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಈ ಹಿಂದಿನವರಂತೆಯೇ ನಿಯಂತ್ರವಣವನ್ನು ಸಡಿಲಗೊಳಿಸಿದರೆ ದೇಶ ತುಂಡಾಗಲಿದೆ ಎಂಬ ನಂಬಿಕೆಯಲ್ಲೇ ಮುಂದುವರೆಯುತ್ತಿದ್ದಾರೆ ಎಂದು ಯಂಗ್ ಕ್ಸಿಯಾಡು ಅಭಿಪ್ರಾಯಪಟ್ಟಿದ್ದಾರೆ. ಕ್ಸೀ ಜಿನ್ಪಿಂಗ್ ಅವರು ಭ್ರಷ್ಟಾಚಾರದ ವಿರುದ್ಧ ಕೈಗೊಂಡಿರುವ ಹೋರಾಟ ಪಕ್ಷದ ರಾಜಕೀಯ ವ್ಯಸ್ಥೆಯನ್ನೂ ಸಂಪೂರ್ಣವಾಗಿ ಶುದ್ಧಗೊಳಿಸಬೇಕಿದೆ ಎಂದು ಚೀನಾದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


