ದೇಶ

ಬೆಳ್ಳಗಿದೆ ಎಂದು ತನ್ನ ಶಿಶುವನ್ನೇ ಹತ್ಯೆಗೈದ ಪಾಪಿ ತಂದೆ

ತಮಗೆ ಹುಟ್ಟುವ ಮಕ್ಕಳು ಬೆಳ್ಳಗೆ, ಸುಂದರವಾಗಿ ಕಾಣುವಂತೆ ಇರಬೇಕು ಎಂದು ಪ್ರತಿ ಪೋಷಕರು ಹಂಬಲಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪಾಪಿ ತಂದೆ...

ಬೆಳ್ಳಗಿದೆ ಎಂದು ತನ್ನ ಶಿಶುವನ್ನೇ ಹತ್ಯೆಗೈದ ಪಾಪಿ ತಂದೆ
ಶಿಶು
Published On :
ಕೋಲ್ಕತ್ತಾ: ತಮಗೆ ಹುಟ್ಟುವ ಮಕ್ಕಳು ಬೆಳ್ಳಗೆ, ಸುಂದರವಾಗಿ ಕಾಣುವಂತೆ ಇರಬೇಕು ಎಂದು ಪ್ರತಿ ಪೋಷಕರು ಹಂಬಲಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪಾಪಿ ತಂದೆ ತನ್ನ ಮಗು ಬೆಳ್ಳಗಿದೆ ಎಂಬ ಕಾರಣಕ್ಕೆ ಅದನ್ನು ಸಾಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. 
ಪಶ್ಚಿಮ ಬಂಗಾಳದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ದಂಪತಿಗಳಾದ ಶೇಕ್ ನಜೀರ್ ಮತ್ತು ಸೈಮಾ ಬಿಬಿ ಎಂಬುವರಿಗೆ ಎರಡುವರೆ ತಿಂಗಳ ಹಿಂದೆ ಮಗು ಜನಿಸಿತ್ತು. ದಂಪತಿಗಳಿಬ್ಬರು ಕಪ್ಪಗಿದ್ದು ಅವರಿಗೆ ಹುಟ್ಟಿದ ಮಗು ಮಾತ್ರ ತುಂಬಾ ಬೆಳ್ಳಗಿದಿದ್ದರಿಂದ ಪತ್ನಿಯ ಮೇಲೆ ಅನುಮಾನಗೊಂಡ ಶೇಕ್ ನಜೀರ್ ತನ್ನ ಸ್ವಂತ ಮಗುವನ್ನೇ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. 
ಮಗು ವಿಚಾರವಾಗಿ ಗಂಡ ಹೆಂಡತಿ ಇಬ್ಬರ ನಡುವೆ ಭಾನುವಾರ ರಾತ್ರಿ ವಾಗ್ವಾದ ನಡೆದಿತ್ತು. ಅಲ್ಲದೆ ಮಗುವನ್ನು ಸಾಯಿಸುವುದಾಗಿ ಗಂಡ ಬೆದರಿಕೆ ಹಾಕಿದ್ದ. ಜಗಳ ಮುಗಿದು ಬೆಳಗ್ಗೆ ಎದ್ದಾಗ ಮಗು ಮೃತಪಟ್ಟಿದೆ. ಇದರಿಂದ ಘಾಸಿಕೊಂಡ ಸೈಮಾ ಜೋರಾಗಿ ಅಳುತ್ತಿದ್ದು ಇದನ್ನು ಗಮನಿಸಿದ ನೆರೆಮನೆಯವರು ನಜೀರ್ ನನ್ನು ಹಿಡಿದು ಚನ್ನಾಗಿ ಥಳಿಸಿದ್ದಾರೆ. ಆದರೆ ಮಗು ಸಾವನ್ನಪ್ಪುವುದಕ್ಕೆ ಚಳಿಯೇ ಕಾರಣ ಎಂದು ನಜೀರ್ ಪೋಷಕರು ಹೇಳುತ್ತಿದ್ದಾರೆ. 
ಮಗು ಸಾವಿನ ಕುರಿತಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿಲ್ಲ. ಮಗುವಿನ ಸಾವು ನೈಸರ್ಗಿಕವೋ ಅಥವಾ ಕೊಲೆಯೋ ಎಂಬುದು ಮರಣೋತ್ತರ ಪರೀಕ್ಷೆ ನಂತರ ತಿಳಿದುಬರುವುದರಿಂದ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ತಾವು ನಜೀರ್ ಮೇಲೆ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.