ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ ಮಾಡಿದ ಕಮಲ್ ಹಾಸನ್
ನಟ ಕಮಲ್ ಹಾಸನ್ ರಾಜಕೀಯ ಎಂಟ್ರಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದ್ದು, ಇತ್ತೀಚೆಗೆ ಕೇರಳ ಸಿಎಂ ಭೇಟಿ ಮಾಡಿದ್ದ ಕಮಲ್ ಶುಕ್ರವಾರ ...

Published On :
ಕೋಲ್ಕೊತಾ: ನಟ ಕಮಲ್ ಹಾಸನ್ ರಾಜಕೀಯ ಎಂಟ್ರಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದ್ದು, ಇತ್ತೀಚೆಗೆ ಕೇರಳ ಸಿಎಂ ಭೇಟಿ ಮಾಡಿದ್ದ ಕಮಲ್ ಶುಕ್ರವಾರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ.
ಕೋಲ್ಕತದಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದ ಕಮಲ್ ಹಾಸನ್ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಮತಾ ಜತೆ ನಿಂತು ತೆಗೆದುಕೊಂಡ ಫೋಟೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಆಹ್ವಾನ ನೀಡಿದ ಪಶ್ಚಿಮ ಬಂಗಾಳ ಸಿಎಂಗೆ ಧನ್ಯವಾದ ಹೇಳಿದ್ದಾರೆ.
ಫಿಲ್ಮ್ ಫೆಸ್ಟಿವಲ್ ಕೇವಲ ವಾರ್ಷಿಕ ಆಚರಣೆ ಮಾತ್ರವಲ್ಲ,ನಮ್ಮ ಜೀವನದ ಒಂದು ಭಾಗ. ನಾವು ಇಂಡಸ್ಚ್ರಿಯಲ್ಲಿ ಕೆಲಸ ಮಾಡದಿದ್ದರೂ, ನಾವು ಸಿನಿಮಾ ಭಕ್ತರಾಗಿರುತ್ತೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


