ದೇಶ

ಅಕ್ರಮಗಳನ್ನು ಬಹಿರಂಗ ಮಾಡುವವರ ಮೇಲೆ ಕೇಜ್ರಿವಾಲ್ ದಾಳಿ ಮಾಡುತ್ತಾರೆ: ಕಪಿಲ್ ಮಿಶ್ರಾ

ಅಕ್ರಮಗಳನ್ನು ಬಹಿರಂಗ ಮಾಡುವವರ ಮೇಲೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ದಾಳಿ ಹಾಗೂ ಬೆದರಿಕೆಗಳನ್ನು ಹಾಕುತ್ತಾರೆಂದು ಉಚ್ಛಾಟಿತ ಆಮ್ ಆದ್ಮಿ ಪಕ್ಷದ ನಾಯಕ ಕಪಿಲ್ ಮಿಶ್ರಾ...

ಅಕ್ರಮಗಳನ್ನು ಬಹಿರಂಗ ಮಾಡುವವರ ಮೇಲೆ ಕೇಜ್ರಿವಾಲ್ ದಾಳಿ ಮಾಡುತ್ತಾರೆ: ಕಪಿಲ್ ಮಿಶ್ರಾ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಕಪಿಲ್ ಮಿಶ್ರಾ
Published On :
ನವದೆಹಲಿ: ಅಕ್ರಮಗಳನ್ನು ಬಹಿರಂಗ ಮಾಡುವವರ ಮೇಲೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ದಾಳಿ ಹಾಗೂ ಬೆದರಿಕೆಗಳನ್ನು ಹಾಕುತ್ತಾರೆಂದು ಉಚ್ಛಾಟಿತ ಆಮ್ ಆದ್ಮಿ ಪಕ್ಷದ ನಾಯಕ ಕಪಿಲ್ ಮಿಶ್ರಾ ಅವರು ಗುರುವಾರ ಹೇಳಿದ್ದಾರೆ. 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪ ಮಾಡಿದ್ದ ಆಮ್ ಆದ್ಮಿ ಪಕ್ಷದ ಬಂಡಾಯ ಶಾಸಕ ಹಾಗೂ ಮಾಜಿ ಸಚಿವ ಕಪಿಲ್ ಮಿಶ್ರಾ ಅವರ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕರು ದೆಹಲಿ ವಿಧಾನಸಭೆಯಲ್ಲಿ ನಿನ್ನೆಯಷ್ಟೇ ಹಲ್ಲೆ ನಡೆಸಿದ್ದರು. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಪಿಲ್ ಮಿಶ್ರಾ ಅವರು, ಬನ್ಸಾಲ್ ಕುಟುಂಬ ಕುರಿತಂತೆ ರಾಹುಲ್ ಶರ್ಮಾ ಅವರು ಕೇಜ್ರಿವಾಲ್ ವಿರುದ್ಧ ತಿರುಗಿಬಿದ್ದಿದ್ದರು. ಅವರ ಮೇಲೆ ಕೂಡ ದಾಳಿ ನಡೆಸಲಾಗಿತ್ತು. ಅಲ್ಲದೆ, ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದೀಗ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಕೇಜ್ರಿವಾಲ್ ಅವರು ನಡೆಸಿರುವ ಭ್ರಷ್ಟಾಚಾರವನ್ನು ಯಾರು ಬಯಲಿಗೆಳೆಯುತ್ತಾರೋ ಆವರ ಮೇಲೆ ದಾಳಿ ಹಾಗೂ ಬೆದರಿಕೆಗಳನ್ನು ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ. 
ದೇಶದ ಶತ್ರುಗಳಾಗಿರುವ ನಕ್ಸಲರೊಂದಿಗೆ ಕೂಡ ಕೇಜ್ರಿವಾಸ್ ಅವರು ಸಂಪರ್ಕವನ್ನು ಹೊಂದಿದ್ದು, ಭದ್ರತಾ ಸಂಸ್ಥೆಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ.
ನನ್ನ ಬಳಿಯಿರುವ ಮಾಹಿತಿಗಳನ್ನು ಗಮಿಸುವುದಾದರೆ, ಕೇಜ್ರಿವಾಲ್ ಅವರಿಗೆ ದೇಶದ ಶತ್ರುಗಳೊಂದಿಗೆ ನಂಟಿದೆ ಎಂಬುದಾಗಿ ತಿಳಿದುಬಂದಿದೆ. ನಕ್ಸಲರೊಂದಿಗೂ ಕೇಜ್ರಿವಾಲ್ ಸಂಪರ್ಕವನ್ನು ಹೊಂದಿದ್ದಾರೆ. ಭದ್ರತಾ ಸಂಸ್ಥೆಗಳು ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕಿದೆ. ರಾಹುಲ್ ಶರ್ಮಾ ಅವರಿಗೆ ಸೂಕ್ತ ರೀತಿಯ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ ಎಂದು ತಿಳಿಸಿದ್ದಾರೆ. 
ನಿನ್ನೆಯಷ್ಟೇ ಕೆಲ ದುಷ್ಕರ್ಮಿಗಳು ರಾಹುಲ್ ಶರ್ಮಾ ಅವರ ಮೇಲೆ ದಾಳಿ ನಡೆಸಿದ್ದರು. ದಾಳಿ ಕುರಿತಂತೆ ಹೇಳಿಕೆ ನೀಡಿರುವ ಗ್ರೇಟರ್ ನೊಯ್ಡಾದ ಅಧಿಕಾರಿ ರಾಕೇಶ್ ಕುಮಾರ್ ಅವರು, ಉದ್ದೇಶಪೂರ್ವಕವಾಗಿ ಗುಂಡನ್ನು ಹಾರಿಸಿಲ್ಲ. ಘಟನೆಯಲ್ಲಿ ರಾಹುಲ್ ಶರ್ಮಾ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ರಾಹುಲ್ ಅವರು ಯಾರ ಮೇಲೆಯೂ ದೂರು ದಾಖಲಿಸಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.