ದೇಶ

ತವರಿಗೆ ಮರಳಿದ ಭಾರತೀಯ ಮಹಿಳೆ: ಸುಷ್ಮಾ ಸ್ವರಾಜ್'ಗೆ ಧನ್ಯವಾದ ಹೇಳಿದ ಉಜ್ಮಾ ಸಹೋದರ

ಪಾಕಿಸ್ತಾನದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ತಮ್ಮ ಸಹೋದರಿಯನ್ನು ಭಾರತಕ್ಕೆ ಕರೆ ತಂದಿದ್ದಕ್ಕೆ ಭಾರತೀಯ ಮಹಿಳೆ ಉಜ್ಮಾ ಸಹೋದರ ವಾಸೀಂ ಅಹ್ಮದ್ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಗುರುವಾರ ಧನ್ಯವಾದಗಳನ್ನು...

ತವರಿಗೆ ಮರಳಿದ ಭಾರತೀಯ ಮಹಿಳೆ: ಸುಷ್ಮಾ ಸ್ವರಾಜ್'ಗೆ ಧನ್ಯವಾದ ಹೇಳಿದ ಉಜ್ಮಾ ಸಹೋದರ
ಭಾರತೀಯ ಮಹಿಳೆ ಉಜ್ಮಾ ಸಹೋದರ ವಾಸೀಂ ಅಹ್ಮದ್
Published On :
ನವದೆಹಲಿ: ಪಾಕಿಸ್ತಾನದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದ ತಮ್ಮ ಸಹೋದರಿಯನ್ನು ಭಾರತಕ್ಕೆ ಕರೆ ತಂದಿದ್ದಕ್ಕೆ ಭಾರತೀಯ ಮಹಿಳೆ ಉಜ್ಮಾ ಸಹೋದರ ವಾಸೀಂ ಅಹ್ಮದ್ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಗುರುವಾರ ಧನ್ಯವಾದಗಳನ್ನು ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ನನಗೆ ಬಹಳ ಸಂತಸವಾಗುತ್ತಿದೆ. ಇಂದು ಬೆಳಿಗ್ಗೆ ಸುಷ್ಮಾ ಸ್ವರಾಜ್ ಅವರು ನನಗೆ ಕರೆ ಮಾಡಿದ್ದರು. ಉಜ್ಮಾ ವಾಘಾ ಗಡಿ ದಾಟಿರುವುದಾಗಿ ತಿಳಿಸಿದರು. ಆದರೆ, ಯಾವ ಸಮಯಕ್ಕೆ ಆಕೆ ಭಾರತಕ್ಕೆ ಬಂದಳು ಎಂಬುದನ್ನು ಹೇಳಲಿಲ್ಲ. ಇಷ್ಟು ಬೇಗ ಈ ರೀತಿ ಬೆಳವಣಿಗೆಗಳು ಆಗುತ್ತವೆ ಎಂದು ತಿಳಿದಿರಲಿಲ್ಲ. ಭಾರತ ಸರ್ಕಾರ ನಮಗೆ ಬಹಳ ಸಹಾಯವನ್ನು ಮಾಡಿದೆ. ಈ ಮೂಲಕ ಸುಷ್ಮಾ ಸ್ವರಾಜ್ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ. 
ಉಜ್ಮಾ ಕುರಿತಂತೆ ಸುಧೀರ್ಘವಾಗಿ ಮಾಹಿತಿಗಳನ್ನು ನೀಡುತ್ತಿದ್ದರು. ಕಚೇರಿಯಿಂದಲೇ ನನಗೆ ಕರೆ ಮಾಡುತ್ತಿದ್ದ ಸುಷ್ಮಾ ಸ್ವರಾಜ್ ಅವರು, ಉಜ್ಮಾ ಭಾರತೀಯ ರಾಯಭಾರಿ ಕಚೇರಿಯಲ್ಲಿದ್ದು, ಸುರಕ್ಷಿತಳಾಗಿದ್ದಾಳೆಂದು ಹೇಳಿದ್ದರು. ಉಜ್ಮಾ ಕೂಡ ಫೋನಿನಲ್ಲಿ ಮಾತನಾಡಿ ಪೊಲೀಸರು ತನಗೆ ರಕ್ಷಣೆ ಹಾಗೂ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಳು. ಇದೀಗ ಉಜ್ಮಾ ಭಾರತಕ್ಕೆ ಮರಳಿ ಬಂದಿರುವುದು ಬಹಳ ಸಂತಸವನ್ನು ತಂದಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.