ಪುಸ್ತಕ ರೂಪದಲ್ಲಿ ಬರಲಿದೆ ಮೋದಿ 'ಮನ್ ಕೀ ಬಾತ್'
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ಪ್ರತಿ ತಿಂಗಳು ಮಾಡುವ ರೇಡಿಯೋ ಭಾಷಣವನ್ನು ಪುಸ್ತಕ ರೂಪದಲ್ಲಿ ತರಲಾಗಿದೆ...

Published On :
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಕಾಶವಾಣಿಯಲ್ಲಿ ಪ್ರತಿ ತಿಂಗಳು ಮಾಡುವ ರೇಡಿಯೋ ಭಾಷಣವನ್ನು ಪುಸ್ತಕ ರೂಪದಲ್ಲಿ ತರಲಾಗಿದೆ.
ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 3 ತುಂಬಲಿರುವ ಮುನ್ನಾ ದಿನ ಅಂದರೆ ಮೇ.25 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪುಸ್ತಕವನ್ನು ಬಿಡುಗಡೆಮಾಡಲಿದ್ದಾರೆ.
ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಅವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಪುಸ್ತಕದ ಮುನ್ನಡಿಯನ್ನು ಬರೆದಿದ್ದಾರೆ.
ಪ್ರಧಾನಿ ಮೋದಿಯವರು ಪ್ರತಿ ತಿಂಗಳಾಂತ್ಯಕ್ಕೆ 1 ಗಂಟೆಗಳ ರೇಡಿಯೋ ಭಾಷಣ ಮಾಡುತ್ತಾರೆ ಎಂಬುದನ್ನು ಕೇಳಿ ಅಚ್ಚರಿ ಪಟ್ಟೆ.ಇದು ಜನರೊಂದಿಗೆ ಸಂಪರ್ಕ ಸಾಧಿಸರು ಅವರು ಹಾತೊರೆಯುವ ಸಂಕೇತ. ಎಂದು ಪುಸ್ತಕದಲ್ಲಿ ಮುನ್ನುಡಿ ಬರೆದಿದ್ದಾರೆ.
ಇದೇ ವೇಳೆ ಪುಸ್ತಕದಲ್ಲಿ ಮೋದಿಯವರು ತಾವೇಕೆ ರೇಡಿಯೋ ಮಾಧ್ಯಮವನ್ನು ಭಾಷಣಕ್ಕೆ ಬಳಸಿಕೊಂಡೆ ಎಂಬುದಕ್ಕೆ ಕಾರಣ ನೀಡಿದ್ದಾರೆ. 'ಅಮೆರಿಕದಲ್ಲಿನ ಅಧ್ಯಕ್ಷರು ರೇಡಿಯೋ ಭಾಷಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಮಾರ್ಟಿನ್ ಲೂಥರ್ ಕಿಂಗ್ ಅವರು 'ಐ ಹ್ಯಾವ್ ಎ ಡ್ರೀಮ್' ಭಾಷಣ ರೇಡಿಯೋದಿಂದಲೇ ಖ್ಯಾತಿ ಹೊಂದಿತು. ಇತರ ಮಾಧ್ಯಮಗಳಿಗಿಂತ ಹೆಚ್ಚು ಬದಲಾವಣೆ ಸೃಷ್ಟಿಸುವ ಶಕ್ತಿ ರೇಡಿಯೋಗಿದೆ ಎಂದು ಮೋದಿಯವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


