ಉತ್ತರ ಪ್ರದೇಶ ದಿನಾಚರಣೆ: ಯೋಗಿ ಆದಿತ್ಯನಾಥ್ ಕ್ರಮಕ್ಕೆ ರಾಜ್ಯಪಾಲರ ಮೆಚ್ಚುಗೆ
ಪ್ರತಿ ಜನವರಿ 24 ನ್ನು ಉತ್ತರ ಪ್ರದೇಶ ದಿನವನ್ನಾಗಿ ಆಚರಣೆ ಮಾಡುವ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಕ್ರಮವನ್ನು ರಾಜ್ಯಪಾಲ ರಾಮ್ ನಾಯ್ಕ್ ಸ್ವಾಗತಿಸಿದ್ದಾರೆ.

Published On :
ಮುಂಬೈ: ಪ್ರತಿ ಜನವರಿ 24 ನ್ನು ಉತ್ತರ ಪ್ರದೇಶ ದಿನವನ್ನಾಗಿ ಆಚರಣೆ ಮಾಡುವ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಕ್ರಮವನ್ನು ರಾಜ್ಯಪಾಲ ರಾಮ್ ನಾಯ್ಕ್ ಸ್ವಾಗತಿಸಿದ್ದಾರೆ.
ಯೋಗಿ ಆದಿತ್ಯನಾಥ್ ದೂರದೃಷ್ಟಿಯ ಆಡಳಿತಗಾರರು. ಉತ್ತರ ಪ್ರದೇಶ ದಿನವನ್ನು ಆಚರಿಸುವ ಪ್ರಸ್ತಾವನೆ ನೀಡಿದ ಬೆನ್ನಲ್ಲೇ ಅದನ್ನು ಗಂಭೀರವಾಗಿ ಪರಿಗಣಿಸಿದ ಯೋಗಿ ಆದಿತ್ಯನಾಥ್, ಮರುದಿನವೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದ್ದಾರೆ. ಎಂದು ರಾಮ್ ನಾಯ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಭಿಯಾನ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ರಾಜ್ಯಪಾಲ ರಾಮ್ ನಾಯ್ಕ್, ಕಳೆದ 28 ವರ್ಷಗಳಿಂದ ಮುಂಬೈ ನಲ್ಲಿ ಉತ್ತರ ಪ್ರದೇಶ ದಿನವನ್ನು ಆಚರಿಸುತ್ತಿರುವ ಮುಂಬೈ ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮರ್ ಜೀತ್ ಮಿಶ್ರಾ ಅವರ ಬಗ್ಗೆಯೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಉತ್ತರ ಪ್ರದೇಶ ದಿನಾಚರಣೆ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ಕೇಳಿದ್ದೆ, ಅಮರ್ ಜಿತ್ ಮಿಶ್ರಾ ಅವರು ಒದಗಿಸಿದ್ದ ಎಲ್ಲಾ ದಾಖಲೆಗಳನ್ನು ಯೋಗಿ ಆದಿತ್ಯನಾಥ್ ಗೆ ರವಾನಿಸಿದೆ. ಯೋಗಿ ಆದಿತ್ಯನಾಥ್ ಕೇವಲ ಒಂದು ದಿನದಲ್ಲೇ ಅದನ್ನು ಅನುಮೋದಿಸಿದರು ಎಂದು ರಾಜ್ಯಪಾಲ ರಾಮ್ ನಾಯ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರ ಪ್ರದೇಶYogi Adityanathಯೋಗಿ ಆದಿತ್ಯನಾಥ್Governor Ram NaikUP Divasಯುಪಿ ದಿವಸ್ರಾಜ್ಯಪಾಲ ರಾಮ್ ನಾಯ್ಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


