ಎನ್ರಾನ್ ಪ್ರಕರಣ: ಹರೀಶ್ ಸಾಳ್ವೆಯನ್ನು ತೆಗೆದು ಪಾಕ್ ಮೂಲದ ವಕೀಲನನ್ನು ನೇಮಿಸಿದ್ದ ಯುಪಿಎ ಸರ್ಕಾರ!
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಪರ ಸಮರ್ಥ ವಾದ ಮಂಡಿಸಿದ್ದ ಹರೀಶ್ ಸಾಳ್ವೆ ಅವರ ಕಾರ್ಯವೈಖರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Published On :
ನವದೆಹಲಿ: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಪರ ಸಮರ್ಥ ವಾದ ಮಂಡಿಸಿದ್ದ ಹರೀಶ್ ಸಾಳ್ವೆ ಅವರ ಕಾರ್ಯವೈಖರಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
2004 ರಲ್ಲಿ ದಾಭೋಲ್ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವನ್ನು ಹರೀಶ್ ಸಾಳ್ವೆ ಪ್ರತಿನಿಧಿಸುತ್ತಿದ್ದರು. ಆದರೆ ಮಾಜಿ ಪ್ರಧಾನಿ ವಾಜಪೇಯಿ ಅವರ ಸರ್ಕಾರದ ಅವಧಿ ಮುಕ್ತಾಯಗೊಂಡ ನಂತರ ಅಸ್ತಿತ್ವಕ್ಕೆ ಬಂದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹರೀಶ್ ಸಾಳ್ವೆ ಅವರನ್ನು ತೆಗೆದು ಭಾರತ ಸರ್ಕಾರದ ಪರ ವಾದ ಮಾಡಲು ಪಾಕಿಸ್ತಾನ ಮೂಲದ ಬ್ರಿಟೀಷ್ ನಾಗರಿಕರಾಗಿರುವ ಖವರ್ ಖುರೇಷಿ ಅವರನ್ನು ನೇಮಕ ಮಾಡಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಇದೇ ಖವರ್ ಖುರೇಷಿ ಈಗ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನದ ಪರ ಅಂತಾರಾಶ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
ದಾಭೋಲ್ ವಿದ್ಯುತ್ ಯೋಜನೆ ಸಂಬಂಧ ಪ್ರಕರಣವೊಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿತ್ತು. ಯೋಜನೆಯ ಗುತ್ತಿಗೆ ಪಡೆದಿದ್ದ ಎನ್ರಾನ್ ಕಂಪನಿ ಭಾರತದ ವಿರುದ್ಧ 600 ಕೋಟಿ ಡಾಲರ್ ನಷ್ಟು ನಷ್ಟ ಭರಿಸುವಂತೆ ಕೋರ್ಟ್ ಮೆಟ್ಟಿಲೇರಿತ್ತು. ಪ್ರಾರಂಭದಲ್ಲಿ ಭಾರತ ಸರ್ಕಾರದ ಪರ ಹರೀಶ್ ಸಾಳ್ವೆ ವಾದಿಸುತ್ತಿದ್ದರಾದರೂ ನಂತರ ಯುಪಿಎ ಸರ್ಕಾರ ಹರೀಶ್ ಸಾಳ್ವೆ ಅವರನ್ನು ತೆಗೆದು ಖುರೇಷಿ ಅವರನ್ನು ನೇಮಿಸಿತ್ತು. ಈಗ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕ್ ಪರ ವಾದಿಸಿ ಸೋತಿದ್ದ ಖುರೇಷಿ ಆಗ ಭಾರತದ ಪರವೂ ಸೋತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


