ಕಪಿಲ್ ಶರ್ಮಾರನ್ನು ಮುಂದಿಟ್ಟುಕೊಂಡು ಕೇಜ್ರಿವಾಲ್‌ರನ್ನು ಮುಗಿಸಲು ಸಾಧ್ಯವಿಲ್ಲ: ಆಪ್
ಬಿಜೆಪಿ ಉಚ್ಛಾಟಿತ ಸದಸ್ಯ ಕಪಿಲ್ ಮಿಶ್ರ ಜತೆ ಸೇರಿಕೊಂಡು ಆಮ್ ಆದ್ಮಿ ಪಕ್ಷ(ಆಪ್) ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಮುಗಿಸಲು...

Published On :
ನವದೆಹಲಿ: ಬಿಜೆಪಿ ಉಚ್ಛಾಟಿತ ಸದಸ್ಯ ಕಪಿಲ್ ಮಿಶ್ರ ಜತೆ ಸೇರಿಕೊಂಡು ಆಮ್ ಆದ್ಮಿ ಪಕ್ಷ(ಆಪ್) ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಮುಗಿಸಲು ಸಾಧ್ಯವಿಲ್ಲ ಎಂದು ಆಪ್ ಮುಖಂಡ ಸಂಜಯ್ ಸಿಂಗ್ ಹೇಳಿದ್ದಾರೆ.
ಆಪ್ ಪಕ್ಷಕ್ಕೆ ನಕಲಿ ಕಂಪನಿಗಳ ಮೂಲಕ ಹವಾಲ ಹಣ ದೇಣಿಗೆ ರೂಪದಲ್ಲಿ ಹರಿದು ಬಂದಿದ್ದು, ಈ ಪೈಕಿ 187 ಕಂಪನಿಗಳು ಒಂದೇ ಹೆಸರಿನಲ್ಲಿವೆ ಎಂದು ದಾಖಲೆಗಳನ್ನು ತೋರಿಸಿದ್ದಾರೆ. ಕೆಲವು ಬ್ಲ್ಯಾಂಕ್ ಚೆಕ್ ಗಳಾಗಿವೆ ಎಂದು ಕಪಿಲ್ ಶರ್ಮಾ ಆರೋಪಿಸಿದ್ದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಜಯ್ ಸಿಂಗ್ ಅವರು, ಬಿಜೆಪಿ ಕಪಿಲ್ ಮಿಶ್ರ ಹಿಂದೆ ಅಡಗಿಕೊಂಡು ಕೇಜ್ರಿವಾಲ್ ಹೆಸರು ಕೆಡಿಸುವ ಯತ್ನ ಕೈಬಿಡಿ. ಆಪ್ ಜತೆ ಹೋರಾಡಲು ಬಯಸುವುದಾದರೆ ಮುಖಾಮುಖಿ ಹೋರಾಟ ನಡೆಸಿ. ಯಾವುದೇ ಸಾಕ್ಷ್ಯವಿಲ್ಲದೆ ಪೇಪರ್ ಚೂರುಗಳನ್ನು ಅಲ್ಲಾಡಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪಕ್ಷಕ್ಕೆ ದೇಣಿಗೆಯಾಗಿ ಕಪ್ಪು ಹಣ ಮತ್ತು ಹವಾಲ ಹಣವನ್ನು ಪಡೆದಿದ್ದಾರೆ. ನಕಲಿ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ನಾಳೆ ದಾಖಳೆ ಸಮೇತ ಸಿಬಿಐಗೆ ದೂರು ನೀಡುತ್ತೇನೆಂದು ಕಪಿಲ್ ಶರ್ಮಾ ಹೇಳಿದ್ದಾರೆ.
ರು.45 ಕೋಟಿ ಹಣವನ್ನು ಜಮಾ ಮಾಡಿ ರೂ.19 ಕೋಟಿ ಮಾತ್ರ ಹಣ ಪಡೆದಿದ್ದೇವೆಂದು ಆಪ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ವಿವರ ನೀಡಿದೆ. ತಮ್ಮ ಆಪ್ತರು ಹವಾಲ ದಂಧೆಯಲ್ಲಿ ತೊಡಗಿಕೊಂಡಿದ್ದಾರೆಂಬುದು ಕೇಜ್ರಿವಾಲ್ ಅವರಿಗೆ ತಿಳಿದಿದೆ. ಆದರೂ ಕೇಜ್ರಿವಾಲ್ ಅವರು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ಕಪಿಲ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅರವಿಂದ್ ಕೇಜ್ರಿವಾಲ್ದೆಹಲಿArvind KejriwalDelhiಆಪ್AAPಕೇಜ್ರಿವಾಲ್ಸಂಜಯ್ ಸಿಂಗ್Sanjay SinghKapil Mishraಕಪಿಲ್ ಮಿಶ್ರಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


