ಜನ ಕೇಜ್ರಿವಾಲ್'ರನ್ನು ತಿರಸ್ಕರಿಸಿದ್ದಾರೆಂಬುದನ್ನು ಆಪ್ ಒಪ್ಪಿಕೊಳ್ಳಬೇಕು: ಕಪಿಲ್ ಮಿಶ್ರಾ
ಇವಿಎಂ (ವಿದ್ಯುನ್ಮಾನ ಮತಯಂತ್ರ) ವಿರುದ್ಧ ಆರೋಪ ಮಾಡುತ್ತಿರುವ ಆಮ್ ಆದ್ಮಿ ಪಕ್ಷ ಜನರು ಕೇಜ್ರಿವಾಲ್ ಅವರನ್ನು ತಿರಸ್ಕರಿಸಿದ್ದಾರೆಂಬುದನ್ನು ಈಗಾಲಾದರೂ ಒಪ್ಪಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಬುಧವಾರ...

Published On :
ನವದೆಹಲಿ: ಇವಿಎಂ (ವಿದ್ಯುನ್ಮಾನ ಮತಯಂತ್ರ) ವಿರುದ್ಧ ಆರೋಪ ಮಾಡುತ್ತಿರುವ ಆಮ್ ಆದ್ಮಿ ಪಕ್ಷ ಜನರು ಕೇಜ್ರಿವಾಲ್ ಅವರನ್ನು ತಿರಸ್ಕರಿಸಿದ್ದಾರೆಂಬುದನ್ನು ಈಗಾಲಾದರೂ ಒಪ್ಪಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಬುಧವಾರ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಸರಣಿ ಭ್ರಷ್ಚಾಚಾರ ಆರೋಪ ಮಾಡಿದ್ದ ಕಪಿಲ್ ಮಿಶ್ರಾ ಅವರು ನನ್ನೆ ದೆಹಲಿ ವಿಧಾನಸಭೆಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಹಾಜರಿದ್ದರು.
ಅಧಿವೇಶನದಲ್ಲಿ ಹಾಜರಿದ್ದ ಕಪಿಲ್ ಮಿಶ್ರಾ ಅವರು ಮುಂದಿನ ಆಸನಗಳಲ್ಲಿ ಕೂರದೇ ಹಿಂದಿನ ಆಸನಗಳಲ್ಲಿ ಕುಳಿತು ಯಾವ ಮಾತನ್ನು ಆಡದೆಯೇ ಸದನದಲ್ಲಿ ನಡೆದ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರು.
ಅಧಿವೇಶನ ಪೂರ್ಣಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಕೇಜ್ರಿವಾಲ್ ಅವರನ್ನು ತಿರಸ್ಕರಿಸಿದ್ದಾರೆ. ಅವರಿಗೆ ಇದೀಗ ಕೇಜ್ರಿವಾಲ್ ಬೇಕಿಲ್ಲ. ಈ ಸತ್ಯವನ್ನು ಆಪ್ ಮುಚ್ಚಿಡಲು ಯತ್ನಿಸುತ್ತಿದೆ ಎಂದಿದ್ದಾರೆ.
ದೆಹಲಿ ನಗರ ಜನತೆಗೆ ನೀರು ಪೂರೈಕೆ ಮಾಡುವಲ್ಲಿ ಕೇಜ್ರಿವಾಲ್ ಅವರು ವಿಫಲರಾಗಿದ್ದರು. ಹೀಗಾಗಿ 7 ಸದಸ್ಯ ಸಂಪುಟ ಅವರನ್ನು ತಿರಸ್ಕರಿಸಿದ್ದರು. ಇವಿಎಂ ಮೂಲಕವೇ ಅಥವಾ ನೀರು ನಿರ್ವಹಣೆ ಕುರಿತಂತೆ ಸೋಲು ಕಂಡಿದ್ದೇವೆಯೋ ಎಂಬುದರ ಬಗ್ಗೆ ಮೊದಲು ಆಪ್ ನಿರ್ಧಾರ ಕೈಗೊಳ್ಳಬೇಕಿದೆ.
ಸೋಲು ಕಂಡಾಗ ಪ್ರಜಾಪ್ರಭುತ್ವವನ್ನು ಪ್ರಶ್ನಿಸುತ್ತಾರೆ. ಇದೇ ಇವಿಎಂ ಮೂಲಕ ನಾವು 67 ಸೀಟುಗಳನ್ನು ಗೆದ್ದಿದ್ದೆವು. ಇದೀಗ ಸೋಲು ಕಂಡ ಬಳಿಕ ಇವಿಎಂ ಕುರಿತು ಪ್ರಶ್ನೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


