ದೇಶ

ರಾಜಸ್ತಾನ: ಟ್ರ್ಯಾಕ್ಟರ್ ಮಗುಚಿ 6 ಮಕ್ಕಳು ಸಾವು, 21 ಮಂದಿಗೆ ಗಾಯ

ಹೆಂಗಸರು ಮತ್ತು ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ನ ಚಾಲಕ...

ರಾಜಸ್ತಾನ: ಟ್ರ್ಯಾಕ್ಟರ್ ಮಗುಚಿ 6 ಮಕ್ಕಳು ಸಾವು, 21 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
Published On :
ಸವೈ ಮದ್ಹೊಪುರ್(ರಾಜಸ್ತಾನ): ಮಹಿಳೆಯರು ಮತ್ತು ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್ ನ ಚಾಲಕ ನಿಯಂತ್ರಣ ತಪ್ಪಿ ಬಿದ್ದು 6 ಮಂದಿ ಮಕ್ಕಳು ಮೃತಪಟ್ಟು 21 ಮಂದಿ ಗಾಯಗೊಂಡಿದ್ದಾರೆ. 
ರಾಜಸ್ತಾನದ ಸವೈ ಮದ್ಹೊಪುರ್ ನಿಂದ 12 ಕಿಲೋ ಮೀಟರ್ ದೂರದಲ್ಲಿ ಕುಶಾಲಿಪುರ ಪ್ರದೇಶದಲ್ಲಿ ಈ ದುರ್ಘಟನೆ ಕಳೆದ ರಾತ್ರಿ 10.45ರ ಸುಮಾರಿಗೆ ನಡೆದಿದೆ.
ಇಂದು ಖಾನ್ಪುರದಲ್ಲಿ ನಡೆಯುವ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರೆಲ್ಲಾ ಹೊರಟಿದ್ದರು. 
ಎರಡು ಟ್ರ್ಯಾಕ್ಟರ್ ಗಳಲ್ಲಿ, ಒಂದರಲ್ಲಿ ಪುರುಷರು ಮತ್ತು ಇನ್ನೊಂದರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೊರಟಿದ್ದರು. ಇವರೆಲ್ಲರೂ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ದೌಲ್ತಪುರ್ ಗ್ರಾಮದಿಂದ ಬಂದಿದ್ದರು. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.