ಕೇಜ್ರಿವಾಲ್ ವಿರುದ್ಧ ಲಂಚ ಆರೋಪ: ಕಪಿಲ್ ಮಿಶ್ರಾ ವಿರುದ್ಧ ಆಪ್ ಕಿಡಿ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಅವರು ಮಾಡುತ್ತಿರುವ ಆರೋಪವನ್ನು ಆಮ್ ಆದ್ಮಿ ಪಕ್ಷ ತಳ್ಳಿಹಾಕಿದ್ದು, ಆರೋಪ ಆಧಾರ ರಹಿತವಾದದ್ದು...

Published On :
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಕಪಿಲ್ ಮಿಶ್ರಾ ಅವರು ಮಾಡುತ್ತಿರುವ ಆರೋಪವನ್ನು ಆಮ್ ಆದ್ಮಿ ಪಕ್ಷ ತಳ್ಳಿಹಾಕಿದ್ದು, ಆರೋಪ ಆಧಾರ ರಹಿತವಾದದ್ದು ಎಂದು ಭಾನುವಾರ ಹೇಳಿದೆ.
ಕಪಿಲ್ ಮಿಶ್ರಾ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು, ಆರೋಪ ಕುರಿತಂತೆ ಹೇಳುವುದಕ್ಕೆ ಏನೂ ಇಲ್ಲ. ಆರೋಪವೊಂದು ಆಧಾರ ರಹಿತವಾದದ್ದು. ಉತ್ತರ ನೀಡುವಂತಹ ವಿಷಯವಲ್ಲ. ಇಂತಹ ಆರೋಪವನ್ನು ಯಾರೂ ನಂಬುವುದೂ ಇಲ್ಲ ಎಂದು ಹೇಳಿದ್ದಾರೆ.
ಸಂಪುಟದಿಂದ ಕೈಬಿಟ್ಟ ಬಳಿಕ ಕೇಜ್ರಿವಾಲ್ ವಿರುದ್ಧ ಬಂಡಾಯವೆದ್ದಿದ್ದ ಕಪಿಲ್ ಮಿಶ್ರಾ ಅವರು, ಹೊಸ ಬಾಂಬ್ ವೊಂದನ್ನು ಸಿಡಿಸಿದ್ದರು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಜೊತೆಗೆ ಸತ್ಯೇಂದರ್ ಜೈನ್ ಅವರು ರೂ.50 ಕೋಟಿ ಭೂ ಒಪ್ಪಂದ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸತ್ಯೇಂದರ್ ಜೈನ್ ಅವರು ಕೇಜ್ರಿವಾಲ್ ಅವರಿಗೆ ನಗದು ರೂಪದಲ್ಲಿ ರೂ.2 ಕೋಟಿಯನ್ನು ನೀಡಿದ್ದರು. ಈ ಹಣದ ಬಗ್ಗೆ ಕೇಜ್ರಿವಾಲ್ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಕೇಜ್ರಿವಾಲ್ ಹಣ ಪಡೆದಿದ್ದನ್ನು ನಾನೇ ನನ್ನ ಕಣ್ಣಿನಿಂದ ನೋಡಿದ್ದೇನೆಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಪ್AAPcorruptionಭ್ರಷ್ಟಾಚಾರKejriwalಕೇಜ್ರಿವಾಲ್Manish SisodiaKapil Mishraಮನೀಷ್ ಸಿಸೋಡಿಯಾಕಪಿಲ್ ಮಿಶ್ರಾDelhi cabinetದೆಹಲಿ ಸಂಪುಟ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


