ದೇಶ

ಫೋನ್ ಕರೆ ಗುಣಮಟ್ಟಕ್ಕಾಗಿ ಟ್ರಾಯ್ ನಿಂದ ಶೀಘ್ರದಲ್ಲೇ ಮೊಬೈಲ್ ಆಪ್ ಬಿಡುಗಡೆ

ನಿಮ್ಮ ದೂರವಾಣಿ ಕರೆಗಳ ಗುಣಮಟ್ಟ ಅಳೆಯುವುದಕ್ಕಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)....

ಫೋನ್ ಕರೆ ಗುಣಮಟ್ಟಕ್ಕಾಗಿ ಟ್ರಾಯ್ ನಿಂದ ಶೀಘ್ರದಲ್ಲೇ ಮೊಬೈಲ್ ಆಪ್ ಬಿಡುಗಡೆ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ನಿಮ್ಮ ದೂರವಾಣಿ ಕರೆಗಳ ಗುಣಮಟ್ಟ ಅಳೆಯುವುದಕ್ಕಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಶೀಘ್ರದಲ್ಲೇ ಮೊಬೈಲ್ ಆಪ್ ವೊಂದನ್ನು ಬಿಡುಗಡೆ ಮಾಡುವುದಾಗಿ ಶುಕ್ರವಾರ ಹೇಳಿದೆ.
ನೀವು ಮಾಡಿದ ಕರೆ ಪೂರ್ಣಗೊಂಡ ನಂತರ ಅದರ ಗುಣಮಟ್ಟ ಹೇಗಿತ್ತು ಎಂಬುದನ್ನು ತಿಳಿಸಲು ಟ್ರಾಯ್ ಈ ಆಪ್ ಅನ್ನು ಪರಿಚಯಿಸುತ್ತಿದ್ದು, 'ಮೈಕಾಲ್' ಎಂಬ ಹೆಸರಿನ ಈ ಆಪ್ ಮೂಲಕ ಫೋನ್ ಕರೆ ಗುಣಮಟ್ಟದ ಬಗ್ಗೆ ಬಳಕೆದಾರರು ರೇಟಿಂಗ್ ಕೊಡಬಹುದು. 
ಇನ್ನು 'Do Not Disturb' ವ್ಯವಸ್ಥೆ ಮೇಲೂ ಟ್ರಾಯ್ ಗಮನ ಹರಿಸಿದ್ದು, ಅದನ್ನು ಇನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಯೋಜನೆ ಸಿದ್ಧಪಡಿಸಿರುವುದಾಗಿ ಟ್ರಾಯ್ ತಿಳಿಸಿದೆ.
ಟ್ರಾಯ್ ಆರಂಭವಾಗಿ 20 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಮಾನದಂಡಗಳೊಂದಿಗೆ ಗ್ರಾಹಕರ ಮುಂದೆ ಬರುತ್ತಿದ್ದೇವೆ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.