ಜಂತರ್ ಮಂತರ್ ನಲ್ಲಿ ರೈತರ ಪ್ರತಿಭಟನೆ: ಅನ್ನದಾತರ ಹೋರಾಟಕ್ಕೆ ಸಾಥ್ ನೀಡಿದ ನಟ ಪ್ರಕಾಶ್ ರೈ ವಿಶಾಲ್
ಕಳೆದ 11 ದಿನಗಳಿಂದ ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುತ್ತಿರುವ ತಮಿಳುನಾಡು ರೈತರಿಗೆ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಬೆಂಬಲ

ನವದೆಹಲಿ: ಕಳೆದ 11 ದಿನಗಳಿಂದ ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುತ್ತಿರುವ ತಮಿಳುನಾಡು ರೈತರಿಗೆ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿಗೆ ತೆರಳಿ ಪ್ರತಿಭಟನಾನಿರತ ಕೃಷಿಕರನ್ನು ಭೇಟಿಯಾದ ಪ್ರಕಾಶ್ ರಾಜ್ ,ದೇಶಕ್ಕೆ ಅನ್ನ ನೀಡಲು ಇಡೀ ಬದುಕನ್ನು ಕಷ್ಟದಲ್ಲೇ ಕಳೆಯುವ ಕೃಷಿಕರ ನೋವನ್ನು ಯಾರೂ ಕೇಳುತ್ತಿಲ್ಲ. ಅವರ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಹೀಗಾದರೆ ಅವರು ಬದುಕುವುದಾದರೂ ಹೇಗೆ?ಎಂದು ಪ್ರಶ್ನಿಸಿದ್ದಾರೆ.
ಕಳೆದ 11 ದಿನಗಳಿಂದ ಸುಮಾರು 84 ರೈತರು ಬರ ಪರಿಹಾಕ್ಕೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಈ ಪ್ರತಿಭಟನೆಗೆ ನಟ ವಿಶಾಲ್, ನಿರ್ದೇಶಕ ಪಾಂಡಿಯನ್ ಮತ್ತಿತರರು ಕೈಜೋಡಿಸಿದ್ದಾರೆ. ಪ್ರಕಾಶ್ ರೈ ಅವರು ಅರುಣ್ ಜೈಟ್ಲಿಯನ್ನು ಭೇಟಿ ಮಾಡಿ ರೈತರ ಸಂಕಷ್ಟವನ್ನು ಸಚಿವರಿಗೆ ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


