ಐಎಸ್ಐಎಸ್ ದಾಳಿ ಬೆದರಿಕೆ: ತಾಜ್ ಮಹಲ್ ಭದ್ರತೆ ಹೆಚ್ಚಳ
ವಿಶ್ವವಿಖ್ಯಾತ ತಾಜ್ ಮಹಲ್ ಮೇಲೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಐಎಸ್ಐಎಸ್) ಉಗ್ರರು ದಾಳಿಗೆ ಸಂಚು....

Published On :
ನವದೆಹಲಿ: ವಿಶ್ವವಿಖ್ಯಾತ ತಾಜ್ ಮಹಲ್ ಮೇಲೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ (ಐಎಸ್ಐಎಸ್) ಉಗ್ರರು ದಾಳಿಗೆ ಸಂಚು ರೂಪಿಸಿರುವ ವರದಿಗಳ ಹಿನ್ನೆಲೆಯಲ್ಲಿ ಪ್ರೀತಿಯ ಸೌಧದ ಭದ್ರತೆಯನ್ನು ಶುಕ್ರವಾರ ಮತ್ತಷ್ಟು ಹೆಚ್ಚಿಸಲಾಗಿದೆ.
ತಾಜ್ ಮಹಲ್ ಗುರಿಯಾಗಿಸಿಕೊಂಡು ಐಎಸ್ಐಎಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಎಲ್ಲಾ ಪೊಲೀಸ್ ಠಾಣೆಗಳಿಗೂ ಹಾಗೂ ಗುಪ್ತಚಲ ಇಲಾಖೆಗೂ ರವಾನಿಸಲಾಗಿದ್ದು, ತಾಜ್ ಮಹಲ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜ್'ಮಹಲ್ ಮೇಲೆ ಯಾವೆಲ್ಲಾ ರೀತಿಯಾಗಿ ದಾಳಿ ಮಾಡಬಹುದು ಎಂಬುದರ ಕುರಿತು ರಚನೆ ಮಾಡಲಾದ ಚಿತ್ರ ಇಸಿಸ್ ಪರವಾದ ವೆಬ್ ಸೈಟ್ ವೊಂದರಲ್ಲಿ ಮಾರ್ಚ್.14 ರಂದು ಪ್ರಕಟವಾಗಿದೆ.
ಅಹ್ವಾಲ್ ಉಮ್ಮಾತ್ ಎಂಬಾತನಿಂದ ದಾಳಿ ಕುರಿತ ಚಿತ್ರ ರಚನೆಯಾಗಿದೆ ಎಂದು ತಿಳಿದುಬಂದಿದೆ. ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಚಿತ್ರದಲ್ಲಿರುವ ಪ್ರಕಾರ, ತಾಜ್ ಮಹಲ್ ಮುಂದೆ ದಾಳಿಗೆ ಸಿದ್ಧವಾಗಿ ನಿಂತಿರುವ ವ್ಯಕ್ತಿ ಸ್ಫೋಟಕ ತುಂಬಿದ ಹಿಂಬದಿ ಬ್ಯಾಗ್ ತೊಟ್ಟು ಬಂದೂಕು ಹಿಡಿದು ನಿಂತಿದ್ದಾನೆ. ಮತ್ತೊಂದು ಚಿತ್ರದಲ್ಲಿ ಅರೇಬಿಕ್ ಭಾಷೆಯಲ್ಲಿ 'ಆಗ್ರಾದಲ್ಲಿ ಹುತಾತ್ಮರಾಗುವ ನಿರೀಕ್ಷೆಯಲ್ಲಿದ್ದೇವೆಂಬ ಅಕ್ಷರಗಳಿದ್ದು, ಇದು ಅತ್ಮಾಹುತಿ ದಾಳಿಯ ಸೂಚನೆಗಳನ್ನು ನೀಡಿದೆ.
ಭಾರತ ಮೇಲೆ ಐಎಸ್ಐಎಸ್ ಉಗ್ರರು ದಾಳಿ ಬೆದರಿಕೆ ಕರೆ ನೀಡುತ್ತಿರುವುದು ಇದು ಮೊದಲೇನಲ್ಲ. ಮಾರ್ಚ್.8 ರಂದು ಲಖನೌನ ಮನೆಯೊಂದರಲ್ಲಿ ಅಡಗಿದ್ದ ಶಂಕಿತ ಉಗ್ರ ಸೈಫುಲ್ಲಾ ಹತ್ಯೆಯ ಬಳಿಕ ಮತ್ತೋರ್ವ ಇಸಿಸ್ ಪರ ಉಗ್ರ ಭಾರತದಲ್ಲಿ ದಾಳಿ ಬೆದರಿಕೆಯ ಸಂದೇಶವನ್ನು ಟೆಲಿಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದ. ಈ ಪೋಸ್ಟ್ ನಲ್ಲಿ ಸೈಫುಲ್ಲಾ ಚಿತ್ರವನ್ನು ತೋರಿಸಲಾಗಿದೆ.
ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈವರೆಗೂ 75 ಭಾರತೀಯರು ಈಗಾಗಲೇ ಐಎಸ್ಐಎಸ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆ. ಐಎಸ್ಐಎಸ್ ಗೆ ಸೇರ್ಪಡೆಗೊಂಡವರಲ್ಲಿ ಬಹುತೇಕರು ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಮೂಲದವರೇ ಆಗಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


