4 ವರ್ಷದ ಬಾಲಕಿಗೆ ಹೃದಯ ಸಮಸ್ಯೆ: ಆರ್ಥಿಕ ನೆರವು ಕೋರಿ ಪ್ರಧಾನಿ ಮೋದಿಗೆ ಪೋಷಕರ ಪತ್ರ
ಹುಟ್ಟಿದಾಗಿನಿಂದಲೂ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ನಾಲ್ಕು ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆಗೆ ನೆರವು ನೀಡುವಂತೆ ಕೋರಿ ನೊಂದ ಪೋಷಕರೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಗುರುವಾರ ಪತ್ರವನ್ನು ಬರೆದಿದ್ದಾರೆ...

Published On :
ಪುಣೆ: ಹುಟ್ಟಿದಾಗಿನಿಂದಲೂ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ನಾಲ್ಕು ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆಗೆ ನೆರವು ನೀಡುವಂತೆ ಕೋರಿ ನೊಂದ ಪೋಷಕರೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಗುರುವಾರ ಪತ್ರವನ್ನು ಬರೆದಿದ್ದಾರೆ.
ಮಹಾರಾಷ್ಟ್ರ ಮೂಲದ ಆರಾಧ್ಯ ಎಂಬ ನಾಲ್ಕು ವರ್ಷದ ಬಾಲಕಿ ಹುಟ್ಟಿದಾಗಿನಿಂದಲೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಬಾಲಕಿಯ ಹೃದಯದಲ್ಲಿ ಸಣ್ಣ ರಂಧ್ರವಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪ್ರಸ್ತುತ ಆರಾಧ್ಯ ಮನೆಯಲ್ಲಿಯೇ ಇದ್ದಾಳೆ. ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದು, ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ.
ಈಗಾಗಲೇ ಚಿಕಿತ್ಸೆಗಾಗಿ ಆರಾಧ್ಯ ಪೋಷಕರು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದು, ಕುಟುಂಬವೀಗ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇವೆಂದು ಆರಾಧ್ಯ ಪೋಷಕರು ಹೇಳಿದ್ದಾರೆ.
ಕಳೆದ ವರ್ಷ ವೈಶಾಲಿ ಎಂಬ ಬಾಲಕಿಗೆ ಪ್ರಧಾನಿ ಮೋದಿಯವರು ಸಹಾಯ ಹಸ್ತ ನೀಡಿದ್ದರು. ಇದೀಗ ನಮ್ಮ ಮಗಳಿಗೂ ಕೂಡ ಅದೇ ರೀತಿಯ ಸಮಸ್ಯೆ ಎದುರಾಗಿದ್ದು, ಮೋದಿಯವರು ಸಹಾಯ ಮಾಡುತ್ತಾರೆಂಬ ಭರವಸೆಯೊಂದಿಗೆ ಪತ್ರವನ್ನು ಬರೆದಿದ್ದೇವೆಂದು ಆರಾಧ್ಯ ತಂದೆ ಹೇಳಿದ್ದಾರೆ.
ಆಂಗಾಂಗ ದಾನ ಕುರಿತು ದೇಶದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈಗಾಗಲೇ ಆರಾಧ್ಯಗಾಗಿ ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದೇವೆ. ಪ್ರಧಾನಿ ಮೋದಿಯವರ ಬೆಂಬಲ ಕೋರಿ ಮಾರ್ಚ್ 19 ರಂದು ರ್ಯಾಲಿಯೊಂದನ್ನು ನಡೆಸುತ್ತಿದ್ದೇವೆ. ಈ ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಬಲ ನೀಡುತ್ತಾರೆಂಬ ವಿಶ್ವಾಸ ನಮಗಿದೆ ಎಂದು ಆರಾಧ್ಯ ಸಂಬಂಧಿಕರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


