ಫೆಬ್ರವರಿಯ ಸಗಟು ಹಣದುಬ್ಬರ ದರ ಶೇ.6.55 ಕ್ಕೆ ಏರಿಕೆ
ಭಾರತದ ವಾರ್ಷಿಕ ಸಗಟು ಹಣದುಬ್ಬರ ದರ ಫೆಬ್ರವರಿ ತಿಂಗಳಲ್ಲಿ ಶೇ.5.25 ರಿಂದ ಶೇ.6.55 ಕ್ಕೆ ಏರಿಕೆಯಾಗಿದೆ.

Published On :
ನವದೆಹಲಿ: ಭಾರತದ ವಾರ್ಷಿಕ ಸಗಟು ಹಣದುಬ್ಬರ ದರ ಫೆಬ್ರವರಿ ತಿಂಗಳಲ್ಲಿ ಶೇ.5.25 ರಿಂದ ಶೇ.6.55 ಕ್ಕೆ ಏರಿಕೆಯಾಗಿದೆ.
ಮಾ.14 ರಂದು ಪ್ರಕಟವಾದ ಅಂಕಿ-ಅಂಶಗಳ ಪ್ರಕಾರ ಜನವರಿಯಿಂದ ಪ್ರಸ್ತುತ ಪರಿಶೀಲನೆಯಲ್ಲಿರುವ ತಿಂಗಳ ವರೆಗೆ ಆಹಾರ ಪದಾರ್ಥಗಳ ಹಣದುಬ್ಬರ ದರ ಶೇ.2.69 ರಷ್ಟು ಏರಿಕೆಯಾಗಿದೆ. ಪ್ರಾಥಮಿಕ ಸರಕುಗಳ ಹಣದುಬ್ಬರ ಫೆಬ್ರವರಿ ತಿಂಗಳಲ್ಲಿ ಶೇ.5 ರಷ್ಟು ಏರಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.
ಈರುಳ್ಳಿ ಹಣದುಬ್ಬರ ಶೇ. (-)18.85 ರಷ್ಟು ಕಡಿಮೆಯಾಗಿದ್ದು, ಆಲುಗಡ್ಡೆಯ ಹಣದುಬ್ಬರ ಶೇ.(-)8.84 ರಷ್ಟು ಕಡಿಮೆಯಾಗಿದ್ದರೆ ಒಟ್ಟಾರೆ ತರಕಾರಿಗಳ ಬೆಲೆ ಶೇ. (-)8.05 ರಷ್ಟು, ಬೇಳೆಕಾಳುಗಳ ಹಣದುಬ್ಬರ ಶೇ.(-)0.79 ಕಡಿಮೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


