ಪ್ರಧಾನಿ ಫೋಟೋ ಬಳಸಿದ್ದಕ್ಕೆ ಕ್ಷಮೆಯಾಚಿಸಿದ ರಿಲಯನ್ಸ್ ಜಿಯೋ, ಪೇಟಿಎಂ
ಅನುಮತಿ ಪಡೆಯದೆ ತಮ್ಮ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಸಿದ್ದಕ್ಕಾಗಿ ರಿಲಯನ್ಸ್ ಜಿಯೋ....

Published On :
ನವದೆಹಲಿ: ಅನುಮತಿ ಪಡೆಯದೆ ತಮ್ಮ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಸಿದ್ದಕ್ಕಾಗಿ ರಿಲಯನ್ಸ್ ಜಿಯೋ ಹಾಗೂ ಪೇಟಿಎಂ ಕ್ಷಮೆಯಾಚಿಸಿರುವುದಾಗಿ ಶುಕ್ರವಾರ ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಈ ಬಗ್ಗೆ ಇಂದು ರಾಜ್ಯಸಭೆಗೆ ಗ್ರಾಹಕ ವ್ಯವಹಾರಗಳ ಖಾತೆ ರಾಜ್ಯ ಸಚಿವ ಸಿ.ಆರ್ ಚೌಧರಿ ಅವರು ಲಿಖಿತ ಉತ್ತರ ನೀಡಿದ್ದು, ರಿಲಯನ್ಸ್ ಜಿಯೋ ಹಾಗೂ ಪೇಟಿಎಂ ತಮ್ಮ ಜಾಹೀರಾತು ತಪ್ಪಿನ ಬಗ್ಗೆ ಕ್ಷಮೆ ಕೇಳಿವೆ ಎಂದು ಹೇಳಿದ್ದಾರೆ.
ರಿಲಯನ್ಸ್ ಜಿಯೋ ಹಾಗೂ ಪೇಟಿಎಂ ಪ್ರಧಾನಿ ಕಚೇರಿಯಿಂದ ಅನುಮತಿ ಪಡೆಯದೆ ನರೇಂದ್ರ ಮೋದಿ ಅವರ ಫೋಟೋ ಒಳಗೊಂಡ ಫುಲ್ ಪೇಜ್ ಜಾಹೀರಾತು ನೀಡಿದ್ದವು. ಇದು ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿತ್ತು. ಬಳಿಕ ವಾಣಿಜ್ಯ ಉದ್ದೇಶಕ್ಕಾಗಿ ಪ್ರಧಾನಿ ಫೋಟೋ ಹಾಗೂ ಹೆಸರು ಬಳಸಿದ್ದ ಈ ಎರಡು ಕಂಪನಿಗಳಿಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ ನೋಟಿಸ್ ಜಾರಿ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


