ಆರ್ ಎಸ್ಎಸ್ ಮುಖಂಡ ಚಂದ್ರಾವತ್ ಗೆ ಜೀವ ಬೆದರಿಕೆ, ಫೇಸ್ ಬುಕ್ ಖಾತೆ ಹ್ಯಾಕ್
ಆರ್ ಎಸ್ಎಸ್ ಮುಖಂಡ ಕುಂದನ್ ಚಂದ್ರಾವತ್ ತಮಗೆ ಜೀವ ಬೆದರಿಕೆ ಬರುತ್ತಿದೆ ಹಾಗೂ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Published On :
ಉಜ್ಜಯಿನಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ತೆಗೆದರೆ ಒಂದು ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ ಆರ್ ಎಸ್ಎಸ್ ಮುಖಂಡ ಕುಂದನ್ ಚಂದ್ರಾವತ್ ತಮಗೆ ಜೀವ ಬೆದರಿಕೆ ಬರುತ್ತಿದೆ ಹಾಗೂ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿ ಸಂಸ್ಥೆ ಐಎಎನ್ಎಸ್ ನೊಂದಿಗೆ ಮಾತನಾಡಿರುವ ಚಂದ್ರಾವತ್ ಫೇಸ್ ಬುಕ್ ಮೂಲಕ ತಮಗೆ ಜೀವ ಬೆದರಿಕೆ ಬರುತ್ತಿದೆ. ಬೆದರಿಕೆ ಬಂದ ನಂತರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಫೇಸ್ ಬುಕ್ ಮಾತ್ರವಲ್ಲದೇ ಮೊಬೈಲ್ ಫೋನ್ ನಿಂದಲೂ ಜೀವ ಬೆದರಿಕೆ ಕರೆಗಳು ಬರುತ್ತಿದೆ ಎಂದು ಹೇಳಿರುವ ಚಂದ್ರಾವತ್ ತಮ್ಮ ವಕೀಲರ ಸಲಹೆ ಪಡೆದು ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ತೆಗೆದರೆ ಒಂದು ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಕ್ಕಾಗಿ ಚಂದ್ರಾವತ್ ಅವರನ್ನು ಆರ್ ಎಸ್ಎಸ್ ಸಹ ಪ್ರಚಾರ ಪ್ರಮುಖ್ ಹುದ್ದೆಯಿಂದ ವಜಾಗೊಳಿಸಿತ್ತು. ಚಂದ್ರಾವತ್ ಹೇಳಿಕೆಯನ್ನಾಧರಿಸಿ ಪೊಲೀಸರು ಈಗಾಗಲೇ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಫೇಸ್ ಬುಕ್RSSಜೀವ ಬೆದರಿಕೆಆರ್ ಎಸ್ಎಸ್ThreatsPinarayi Vijayanಪಿಣರಾಯಿ ವಿಜಯನ್Facebook accountKundan Chandrawatಕುಂದನ್ ಚಂದ್ರಾವತ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


