ದೇಶ

ದೇಶದಾದ್ಯಂತ ಈದ್ ಸಂಭ್ರಮ: ಮುಸ್ಲಿಂ ಬಾಂಧವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭಾಶಯ

ದೇಶದಾದ್ಯಂತ ಈದ್-ಉಲ್-ಫಿತರ್ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಮುಸ್ಲಿಂ ಬಾಂಧವರಿಗೆ ಸೋಮವಾರ ಶುಭಾಶಯಗಳನ್ನು ಕೋರಿದ್ದಾರೆ...

ದೇಶದಾದ್ಯಂತ ಈದ್ ಸಂಭ್ರಮ: ಮುಸ್ಲಿಂ ಬಾಂಧವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭಾಶಯ
ದೇಶದಾದ್ಯಂತ ಈದ್ ಸಂಭ್ರಮ: ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
Published On :
ನವದೆಹಲಿ: ದೇಶದಾದ್ಯಂತ ಈದ್-ಉಲ್-ಫಿತರ್ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಮುಸ್ಲಿಂ ಬಾಂಧವರಿಗೆ ಸೋಮವಾರ ಶುಭಾಶಯಗಳನ್ನು ಕೋರಿದ್ದಾರೆ. 
ವೈವಿಧ್ಯತೆ ಭಾರತದ ವಿಶೇಷ, ಇಂದು ದೇಶದಾದ್ಯಂತ ಈದ್ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ದೇಶದ ಎಲ್ಲಾ ಮುಸ್ಲಿಂ ಸಹೋದರರು, ಸಹೋದರಿಯರು, ಭಾರತೀಯರು ಹಾಗೂ ವಿದೇಶದಲ್ಲಿರುವವರಿಗೆಲ್ಲರಿಗೂ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ. 
ರಂಜಾನ್ ಅತ್ಯಂತ ಪವಿತ್ರತೆಯುಳ್ಳ ತಿಂಗಳಾಗಿದ್ದು, ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಇದೀಗ ಈದ್ ಆಚರಣೆಯ ಸಮಯ. ಈದ್-ಉಲ್-ಫಿತರ್ ಆಚರಣೆ ಹಿನ್ನಲೆಯಲ್ಲಿ ದೇಶದ ಪ್ರತೀಯೊಬ್ಬ ನಾಗರಿಕನಿಗೂ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಇದರಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಕೂಡ ಮುಸ್ಲಿಂ ಬಾಂಧವರಿಗೆ ಈದ್-ಉಲ್-ಫಿತರ್ ಶುಭಾಶಯಗಳನ್ನು ಕೋರಿದ್ದಾರೆ. 
ಈದ್ ಆಚರಣೆ ವಿಶ್ವಕ್ಕೆ ಸಂತೋಷ ಮತ್ತು ಶಾಂತಿಯ ಸಂದೇಶವನ್ನು ಈ ವಿಶೇಷ ದಿನದಂದು ಸಾರುತ್ತದೆ. ಪರಸ್ಪರ ಸೋದರತ್ವದ ಶಕ್ತಿ, ಸಾಮಾಜಿಕ ಏಕತೆಯನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.