ಪಾಕ್ ಪರ ಘೋಷಣೆ ಕೂಗುವವರು, ಪಾಕಿಸ್ತಾನಕ್ಕೆ ಹೋಗಲಿ: ಮಿರ್ವಾಜ್'ಗೆ ಆರ್'ಎಸ್ಎಸ್
ಚಾಂಪಿಯನ್ಸ್ ಟ್ರೋಪಿ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಗೆಲವು ಸಾಧಿಸುತ್ತಿದ್ದಂತೆಯೇ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳು ಸಂಭ್ರಮಾಚರಣೆ ಮಾಡಿರುವುದಕ್ಕೆ ಆರ್'ಎಸ್ಎಸ್ ತೀವ್ರವಾಗಿ...

Published On :
ಅಯೋಧ್ಯೆ: ಚಾಂಪಿಯನ್ಸ್ ಟ್ರೋಪಿ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಗೆಲವು ಸಾಧಿಸುತ್ತಿದ್ದಂತೆಯೇ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳು ಸಂಭ್ರಮಾಚರಣೆ ಮಾಡಿರುವುದಕ್ಕೆ ಆರ್'ಎಸ್ಎಸ್ ತೀವ್ರವಾಗಿ ಕಿಡಿಕಾರಿದೆ.
ಪಾಕಿಸ್ತಾನ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತ್ಯೇಕತಾವಾದಿ ನಾಯಕ ಮಿರ್ವಾಜಾ ಉಮರ್ ಫಾರೂಕ್ ಶುಭಾಶಯ ಕೋರಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆರ್'ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಅವರು, ಪಾಕಿಸ್ತಾನ ಕ್ರಿಕೆಟ್ ತಂಡದ ಪರವಾಗಿ ಘೋಷಣೆ ಕೂಗುವವರು, ಅಭಿನಂದಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದ್ದಾರೆ.
ಮಿರ್ವಾಜಾ ಉಮರ್ ಅವರು ಕಾಶ್ಮೀರದಲ್ಲಿರುವ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಅವರು ಶುಭಾಶಯ ಕೋರಿದ್ದಾರೆ. ಇಂತಹ ಚಟುವಟಿಕೆಗಳು ನಡೆಸುವವರು ರಾಷ್ಟ್ರೀಯವಾದಿಗಳಾಗುವುದಿಲ್ಲ. ಇಸ್ಲಾಮಿಸ್ಟ್ ಗಳಾಗುತ್ತಾರೆ. ದೇಹ ಇಲ್ಲಿಯೇ ಇದ್ದರೂ ಅವರ ಆತ್ಮಗಳು ಪಾಕಿಸ್ತಾನದಲ್ಲಿರುತ್ತವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
RSSPakistanಪಾಕಿಸ್ತಾನKashmirಕಾಶ್ಮೀರಆರ್\'ಎಸ್ಎಸ್Indresh Kumarಇಂದ್ರೇಶ್ ಕುಮಾರ್Mirwaiz Umar Farooqಮಿರ್ವಾಜಾ ಉಮರ್ ಫಾರೂಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


