ದೇಶ

ಶೀಘ್ರ ರಾತ್ರಿ ಪ್ರಯಾಣಕ್ಕೂ ಡಬಲ್ ಡೆಕ್ಕರ್ ರೈಲು ಆರಂಭ: ಸುರೇಶ್ ಪ್ರಭು

ವ್ಯಾಪಾರಿ ಪ್ರಯಾಣಿಕರನ್ನು ಆಕರ್ಷಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಶೀಘ್ರದಲ್ಲೇ ಇಡೀ ರಾತ್ರಿ ಪ್ರಯಾಣಕ್ಕೆ ಅನುಕೂಲವಾಗುವಂತೆ...

ಶೀಘ್ರ ರಾತ್ರಿ ಪ್ರಯಾಣಕ್ಕೂ ಡಬಲ್ ಡೆಕ್ಕರ್ ರೈಲು ಆರಂಭ: ಸುರೇಶ್ ಪ್ರಭು
ಸುರೇಶ್ ಪ್ರಭು
Published On :
ನವದೆಹಲಿ: ವ್ಯಾಪಾರಿ ಪ್ರಯಾಣಿಕರನ್ನು ಆಕರ್ಷಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಶೀಘ್ರದಲ್ಲೇ ಇಡೀ ರಾತ್ರಿ ಪ್ರಯಾಣಕ್ಕೆ ಅನುಕೂಲವಾಗುವಂತೆ ಆಧನಿಕ ಸೌಲಭ್ಯವಿರುವ ಡಬಲ್ ಡೆಕ್ಕರ್ ರೈಲು ಬಿಡುಗಡೆ ಮಾಡುವುದಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮಂಗಳವಾರ ಹೇಳಿದ್ದಾರೆ.
ಪ್ರಮುಖ ಮೆಟ್ರೊಪೊಲಿಟನ್ ನಗರಗಳ ಮಧ್ಯೆ ಉದಯ್ ಎಕ್ಸ್ ಪ್ರೆಸ್ ಎಂಬ ಹೆಸರಿರುವ ಡಬಲ್ ಡೆಕ್ಕರ್ ರೈಲು ಓಡಲಿದೆ ಎಂದು ರೈಲ್ವೆ ಸಚಿವರು, 'ಸ್ಮಾರ್ಟ್ ರೈಲ್ವೆ ಕಾನ್ಕ್ಲೇವ್' ನಲ್ಲಿ ತಿಳಿಸಿದ್ದಾರೆ. 
ರಾತ್ರಿ ಬಿಟ್ಟು ಬೆಳಗ್ಗೆ ತಲುಪುವ ವ್ಯಾಪಾರಿ ಪ್ರಯಾಣಿಕರಿಗಾಗಿ ನಾವು ಉದಯ್ ಎಕ್ಸ್ ಪ್ರೆಸ್(ಉತ್ಕೃಷ್ಟ್ ಡಬಲ್ ಡೆಕ್ಕರ್ ಎಸಿ ಯಾತ್ರಿ ಎಕ್ಸ್ ಪ್ರೆಸ್)  ರೈಲನ್ನು ಆರಂಭಿಸುತ್ತಿದ್ದೇವೆ. ಇದರಲ್ಲಿ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳಿರುವುದರಿಂದ ಪ್ರಯಾಣಿಕರು ಹೋಟೆಲ್ ನಲ್ಲಿ ತಂಗುವ ವೆಚ್ಚವನ್ನು ಉಳಿಸಬಹುದಾಗಿದೆ ಎಂದು ಸುರೇಶ್ ಪ್ರಭು ಅವರು ಹೇಳಿದ್ದಾರೆ.
ಉದಯ್ ಎಕ್ಸ್ ಪ್ರೆಸ್ ನಲ್ಲಿ ಸ್ಲೀಪರ್ ಬರ್ತ್ ಇರುವುದಿಲ್ಲ. ಆರಾಮದಾಯಕ ಒರಗಿಕೊಳ್ಳುವ ಕುರ್ಚಿಗಳಿರುತ್ತವೆ.ರೈಲಿನಲ್ಲಿರುವ ಪ್ರತಿ ಬೋಗಿಗಳಲ್ಲಿ 120 ಮಂದಿ ಕುಳಿತುಕೊಳ್ಳುವ ಆಸನಗಳಿದ್ದು ಪ್ರಯಾಣಿಕರಿಗೆ ಬಿಸಿ ಬಿಸಿ ಆಹಾರ ಮತ್ತು ಪಾನೀಯ ಮಾರಾಟ ಯಂತ್ರಗಳಿರುತ್ತವೆ.
ಇದು ದೆಹಲಿ-ಲಕ್ನೋದಂತಹ ಮಾರ್ಗಗಳಲ್ಲಿ ಸಂಚರಿಸಲಿದ್ದು 3ಎಸಿ ದರ್ಜೆಯ ಬೋಗಿಗಳಿಗಿಂತ ಕಡಿಮೆ ಟಿಕೆಟ್ ಬೆಲೆಯನ್ನು ಹೊಂದಿರುತ್ತದೆ ಮತ್ತು ಹೆಚ್ಚು ಮೂಲಭೂತ ಸೌಕರ್ಯಗಳಿರುತ್ತವೆ.
ಪ್ರತಿ ಬೋಗಿಗಳಲ್ಲಿ ದೊಡ್ಡ ಎಲ್ ಸಿಡಿ ಟಿವಿ ಪರದೆ, ವೈ ಫೈ ಸಂಪರ್ಕದ ಹೆಡ್ ಫೋನ್ ಗಳಿಂದ ಪ್ರಯಾಣಿಕರಿಗೆ ಟಿವಿಯ ಧ್ವನಿ ಕೇಳುವ ಸೌಲಭ್ಯಗಳಿರುತ್ತದೆ. ರಾತ್ರಿ ಹಗಲು ಸಂಚರಿಸುವ ರೈಲಿನಲ್ಲಿ ಸ್ಲೀಪರ್ ಬರ್ತ್ ಇಲ್ಲದಿದ್ದರೂ ಕೂಡ ಪ್ರಯಾಣಿಕರಿಗೆ ಪ್ರಯಾಣ ಸುಲಭವಾಗುವ ರೀತಿಯಲ್ಲಿ ಕೆಲವು ಸೌಕರ್ಯಗಳನ್ನು ಒದಗಿಸಲಾಗಿದೆ.
ಸೀಟುಗಳಲ್ಲಿ ಕಾಲಿಡಲು ಸಾಕಷ್ಟು ಜಾಗಗಳು, ಆಧುನಿಕ ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಎಲ್ಲಾ ಬೋಗಿಗಳಲ್ಲಿ ಬಯೋ ಶೌಚಾಲಯಗಳಿವೆ. ಈ ರೈಲು ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.