2,000 ರೂ. ನೋಟುಗಳನ್ನು ಹಿಂಪಡೆಯುವುದಿಲ್ಲ, 200 ರೂ. ನೋಟು ಶೀಘ್ರದಲ್ಲೆ ಚಲಾವಣೆಗೆ: ಗಂಗ್ವಾರ್
ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ರದ್ದುಗೊಳಿಸಲಿದೆ ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಸಂತೋಶ್ ಕುಮಾರ್ ಗಂಗ್ವಾರ್, 2,000 ರೂ ನೋಟುಗಳನ್ನು...

Published On :
ನವದೆಹಲಿ: ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ರದ್ದುಗೊಳಿಸಲಿದೆ ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಸಂತೋಶ್ ಕುಮಾರ್ ಗಂಗ್ವಾರ್, 2,000 ರೂ ನೋಟುಗಳನ್ನು ರದ್ದು ಮಾಡುವುದಿಲ್ಲ ಎಂದು ಹೇಳಿದ್ದಾರೆ.
"ಕೇಂದ್ರ ಸರ್ಕಾರ 2,000 ರೂ ನೋಟುಗಳನ್ನು ರದ್ದು ಮಾಡುವುದಿಲ್ಲ, ಆದರೆ 200 ರೂ ನೋಟುಗಳನ್ನು ಪರಿಚಯಿಸಲಿದೆ ಎಂದು ಐಎಎನ್ಎಸ್ ಸಂದರ್ಶನದಲ್ಲಿ ಗಂಗ್ವಾರ್ ತಿಳಿಸಿದ್ದಾರೆ. 2,000 ರೂ ನೋಟುಗಳ ಮುದ್ರಣ ಕಡಿಮೆ ಮಾಡುವುದು ಬೇರೆಯ ವಿಷಯ, ಆದರೂ ಈ ಬಗ್ಗೆ ಆರ್ ಬಿಯಿಂದ ಸ್ಪಷ್ಟನೆ ಸಿಗಬೇಕಿದೆ. ಆರ್ ಬಿಐ 2,000 ರೂ ನೋಟುಗಳ ಬಗ್ಗೆ ಮಾಹಿತಿ ನೀಡಲಿದೆ ಎಂದು ಗಂಗ್ವಾರ್ ಹೇಳಿದ್ದಾರೆ.
ಆರ್ ಬಿಐ ಶೀಘ್ರವೇ 200 ರೂ ನೋಟುಗಳನ್ನು ಚಲಾವಣೆಗೆ ತರಲಿದೆ ಎಂಬ ಮಾಹಿತಿ ಬರುತ್ತಿದ್ದಂತೆಯೇ, ರೂ 2,000 ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಸಂತೋಶ್ ಕುಮಾರ್ ಗಂಗ್ವಾರ್ ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


