ಮುಂಬೈ: ಟೊಮೆಟೋ ಕಳ್ಳರ ಭೀತಿ, ಮಾರುಕಟ್ಟೆಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ
ದೇಶದಾದ್ಯಂತ ಟೊಮೆಟೋ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಇದೀಗ ಟೊಮೆಟೋಗೆ ಚಿನ್ನದ ಬೆಲೆ ಬಂದಂತಾಗಿದೆ. ಈ ಹಿನ್ನಲೆಯಲ್ಲಿ ಮುಂಬೈನ ಮಾರುಕಟ್ಟೆಯೊಂದರಲ್ಲಿ 300 ಕೆಜಿ ತೂಕದ ರೂ. 30 ಸಾವಿರ ಮೌಲ್ಯದ...

Published On :
ಮುಂಬೈ: ದೇಶದಾದ್ಯಂತ ಟೊಮೆಟೋ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಇದೀಗ ಟೊಮೆಟೋಗೆ ಚಿನ್ನದ ಬೆಲೆ ಬಂದಂತಾಗಿದೆ. ಈ ಹಿನ್ನಲೆಯಲ್ಲಿ ಮುಂಬೈನ ಮಾರುಕಟ್ಟೆಯೊಂದರಲ್ಲಿ 300 ಕೆಜಿ ತೂಕದ ರೂ. 30 ಸಾವಿರ ಮೌಲ್ಯದ ಟೊಮೆಟೋಗಳನ್ನು ದರೋಡೆ ಮಾಡಲಾಗಿದೆ.
ಮುಂಬೈನ್ ಶಾಂತಿನಗರ ನಿವಾಸಿಯಾಗಿರುವ ಶಾಂತಿಲಾಲ್ ಶ್ರೀವಾಸ್ತವ್ ಎಂಬುವವರು ಮಾರಾಟಕ್ಕಾಗಿ ನವಿ ಮುಂಬೈ ಎಪಿಎಂಸಿಯಲ್ಲಿ ಟೊಮೆಟೋ ಖರೀದಿಸಿದ್ದರು. ಅಂಗಡಿ ಮುಂದೆ ಇಡಲಾಗಿದ್ದ ಟೊಮೆಟೋಗಳನ್ನು ಖದೀಮರು ರಾತ್ರೋರಾತ್ರಿ ಲಪಟಾಸಿದ್ದಾರೆ.
ಮಾರುಕಟ್ಟೆಯಲ್ಲಿ ಟೊಮೆಟೋ ಕಳ್ಳತನವಾಗುತ್ತಿರುವ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಇಂದೋರ್ ಮಾರುಕಟ್ಟೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅಲ್ಲಲ್ಲಿ ಯೋಧರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


