ಜಾಧವ್ ತಾಯಿಗೆ ವೀಸಾ ನೀಡಲು ಪಾಕಿಸ್ತಾನ ಸರ್ಕಾರದ ಚಿಂತನೆ: ವರದಿ
ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲ್ ಭೂಷಣ್ ಜಾಧವ್ ಅವರ ತಾಯಿಗೆ ವೀಸಾ ನೀಡುವ ಪ್ರಸ್ತಾವನೆಯನ್ನು ಪಾಕಿಸ್ತಾನ ಸರ್ಕಾರ ಪರಿಗಣಿಸುತ್ತಿದೆ.

Published On :
ಇಸ್ಲಾಮಾಬಾದ್: ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲ್ ಭೂಷಣ್ ಜಾಧವ್ ಅವರ ತಾಯಿಗೆ ವೀಸಾ ನೀಡುವ ಪ್ರಸ್ತಾವನೆಯನ್ನು ಪಾಕಿಸ್ತಾನ ಸರ್ಕಾರ ಪರಿಗಣಿಸುತ್ತಿದೆ ಎಂದು ಅಲ್ಲಿನ ಮಾಧ್ಯಮ ದಿ ನೇಷನ್ ಡೈಲಿ ವರದಿ ಪ್ರಕಟಿಸಿದೆ.
ಇದೇ ವೇಳೆ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ನಫೀಜ್ ಝಕಾರಿಯಾ ಅವರ ಹೇಳಿಕೆಯನ್ನೂ ಪ್ರಕಟಿಸಿರುವ ದಿ ನೇಷನ್ ಪತ್ರಿಕೆ, ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಪಾಕಿಸ್ತಾನಿಗಳಿಗೆ ವೀಸಾ ನೀಡುವ ವಿಚಾರದಲ್ಲಿ ಭಾರತ ಕಠಿಣ ನಿಬಂಧನೆಗಳನ್ನು ವಿಧಿಸಿರುವುದರ ಬಗ್ಗೆ ನಫೀಜ್ ಝಕಾರಿಯಾ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮೂಲಕ ತಿಳಿದುಬಂದಿದೆ.
ಇದಕ್ಕೂ ಮುನ್ನ, ಕುಲಭೂಷಣ್ ಜಾಧವ್ ತಾಯಿಗೆ ಪಾಕಿಸ್ತಾನ ವೀಸಾ ನೀಡುವಂತೆ ತಾವೇ ಖುದ್ದಾಗಿ ಪತ್ರ ಬರೆದಿದ್ದರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸದ ಪಾಕಿಸ್ತಾನ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ವಿರುದ್ಧ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ವಾಗ್ದಾಳಿ ನಡೆಸಿದ್ದರು.
ಪಾಕಿಸ್ತಾನದಲ್ಲಿರುವ ತನ್ನ ಪುತ್ರನನ್ನು ಭೇಟಿ ಮಾಡಲು ವೀಸಾ ಅರ್ಜಿ ಸಲ್ಲಿಸಿರುವ ಆವಂತಿಕ ಜಾಧವ್ ಅವರ ಅರ್ಜಿ ವಿಲೇವಾರಿ ಬಾಕಿಯಿದೆ. ಅವರಿಗೆ ವೀಸಾ ಕೊಡಿಸುವಂತೆ ನಾನು ಖುದ್ದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಅವರಿಗೆ ಪತ್ರ ಬರೆದಿದ್ದೇನೆ.ಆದರೆ ನನ್ನ ಪತ್ರಕ್ಕೆ ಪ್ರತಿಕ್ರಿಯೆ ನೀಡುವ ಸೌಜನ್ಯವನ್ನು ಕೂಡ ಸರ್ತಾಜ್ ಅಜೀಜ್ ಮಾಡಿಲ್ಲ ಎಂದು ಅವರು ಟ್ವೀಟ್ ಮಾಡಿದ್ದರು.
ಸರಣಿ ಟ್ವೀಟ್ ಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಅವರು, ಭಾರತದಲ್ಲಿ ಚಿಕಿತ್ಸೆ ಪಡೆಯಲು ವೈದ್ಯಕೀಯ ವೀಸಾಕ್ಕೆ ಅರ್ಜಿ ಸಲ್ಲಿಸುವವರ ಮೇಲೆ ನನಗೆ ಕರುಣೆಯಿದೆ. ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ಕೊಡಬೇಕೆಂದರೆ ಅದಕ್ಕೆ ಸರ್ತಾಜ್ ಅಜೀಜ್ ಅವರ ಶಿಫಾರಸು ಬೇಕು ಎಂದು ಸುಷ್ಮಾ ಸ್ವರಾಜ್ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


