ಭಾರತೀಯ ಫೌಂಡೇಶನ್ ಸಂಶೋಧಕರಿಗೆ ವೀಸಾ ನಿರಾಕರಿಸಿಲ್ಲ: ಚೀನಾ ರಾಯಭಾರಿ ಕಚೇರಿ
ಭಾರತದ ಇಬ್ಬರು ಸಂಶೋಧಕರಿಗೆ ವೀಸಾ ನಿರಾಕರಣೆ ಮಾಡಿರುವ ವರದಿಗಳನ್ನು ಚೀನಾ ರಾಯಭಾರಿ ಕಚೇರಿ ಅಲ್ಲಗಳೆದಿದೆ.

Published On :
ನವದೆಹಲಿ: ಭಾರತದ ಇಬ್ಬರು ಸಂಶೋಧಕರಿಗೆ ವೀಸಾ ನಿರಾಕರಣೆ ಮಾಡಿರುವ ವರದಿಗಳನ್ನು ಚೀನಾ ರಾಯಭಾರಿ ಕಚೇರಿ ಅಲ್ಲಗಳೆದಿದೆ.
ಶಾಂಘೈ ನಲ್ಲಿರುವ ಫುಡಾನ್ ವಿಶ್ವವಿದ್ಯಾನಿಲಯಕ್ಕೆ ಭಾರತದಿಂದ 7 ಸದಸ್ಯರ ನಿಯೋಗ ಭೇಟಿ ನೀಡಲಿದ್ದು, ಈ ಪೈಕಿ ಇಬ್ಬರು ಸಂಶೋಧಕರಿಗೆ ವೀಸಾ ನಿರಾಕರಿಸಲಾಗಿದೆ ಎಂಬ ವರದಿ ಪ್ರಕಟವಾಗಿತ್ತು. ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿಯ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಾರತೀಯ ರಾಯಭಾರಿಗಳಿಗೆ ವೀಸಾ ನಿರಾಕರಣೆ ಮಾಡಿಲ್ಲ ಎಂದು ಹೇಳಿದೆ.
ಇಂಡಿಯಾ ಫೌಂಡೇಶನ್ ನ ನಿರ್ದೇಶಕ ಅಲೋಕ್ ಬನ್ಸಾಲ್ ಅವರ ವೀಸಾ ತಡೆ ಹಿಡಿದು, ಇಬ್ಬರು ಸಂಶೋಧಕರ ವೀಸಾಗಳನ್ನು ನಿರಾಕರಿಸಿತ್ತು, ಈ ಬೆಳವಣಿಗೆ ಬೆನ್ನಲ್ಲೇ ಇಂಡಿಯಾ ಫೌಂಡೇಶನ್ ಚೀನಾ ಭೇಟಿಯನ್ನು ರದ್ದುಗೊಳಿಸಿತ್ತು. ಆದರೆ ಈ ಬಗ್ಗೆ ಚೀನಾ ಸ್ಪಷ್ಟನೆ ನೀಡಿದ್ದು, ಚೀನಾ ಯಾವುದೇ ವೀಸಾ ತಡೆಹಿಡಿದಿಲ್ಲ. ನಿಯೋಗ ಪೂರ್ವನಿಗದಿಯಂತೆ ಚೀನಾಗೆ ಭೇಟಿ ನೀಡಲಿದೆ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


