1971ರ ಕರಾಚಿ ಹಾರ್ಬರ್ ದಾಳಿ ಹೀರೋ ಲೆಫ್ಟಿನೆಂಟ್ ಕಮಾಂಡರ್ ಬಿಎನ್ ಕವಿನ ನಿಧನ!
1971 ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ದ ಸಂದರ್ಭದಲ್ಲಿ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದ್ದ ಐಎನ್ ಎಸ್ ನಿಪತ್ ಮುದಾಳತ್ವ ವಹಿಸಿದ್ದ ಲೆಫ್ಟಿನೆಂಟ್ ಕಮಾಂಡರ್ ಬಿಎನ್ ಕವಿನ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಡಿಲೇಡ್: 1971 ರ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ದ ಸಂದರ್ಭದಲ್ಲಿ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದ್ದ ಐಎನ್ ಎಸ್ ನಿಪತ್ ಮುದಾಳತ್ವ ವಹಿಸಿದ್ದ ಲೆಫ್ಟಿನೆಂಟ್ ಕಮಾಂಡರ್ ಬಿಎನ್ ಕವಿನ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
80 ವರ್ಷ ವಯಸ್ಸಿನ ಕವಿನ ಅವರು ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ನಿಧನರಾಗಿದ್ದು, ಕಳೆದ ಹಲವು ತಿಂಗಳುಗಳಿಂದ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಕವಿನ ಅವರ ಅಂತ್ಯಸಂಸ್ಕಾರ ಆಸ್ಟ್ರೇಲಿಯಾದಲ್ಲೇ ನಡೆಯುತ್ತದೆಯೇ ಅಥವಾ ಭಾರತದಲ್ಲಿ ನಡೆಯುತ್ತದೆಯೇ ಎಂಬುದು ತಿಳಿದುಬಂದಿಲ್ಲ. ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ತಮ್ಮ ಪುತ್ರ ಮತ್ತು ಕುಟುಂಬದೊಂದಿಗೆ ಕವಿನ ಅವರು ನಿಲೆಸಿದ್ದರು ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಭಾರತದ ಮೂರು ಯುದ್ಧನೌಕೆಗಳು ಪಾಕಿಸ್ತಾನದ ವಿರುದ್ಧ ದಂಡೆತ್ತಿ ಹೋಗಿದ್ದವು. ಐಎನ್ ಎಸ್ ನಿಪತ್, ಐಎನ್ ಎಸ್ ನೀರ್ಘಾಟ್ ಮತ್ತು ಐಎನ್ ಎಸ್ ವೀರ್ ಪಾಕಿಸ್ತಾನದ ಬಂದರುಗಳ ಮೇಲೆ ದಾಳಿ ಮಾಡಿದ್ದವು. ಈ ಪೈಕಿ ಐಎನ್ ಎಸ್ ನಿಪತ್ ಗೆ ಕವಿನ ಅವರು ಸಾರಥ್ಯವಹಿಸಿದ್ದರು. ಈ ವೇಳೆ ಕರಾಚಿ ಬಂದಿರನ ಮೇಲೆ ಕ್ಷಿಪಣಿಗಳ ಸುರಿಮಳೆಗರೆದಿದ್ದ, ಕವಿನ ಅವರು ಪಾಕ್ ಸೈನಿಕ ಹುಟ್ಟಡಗಿಸಿದ್ದರು.
ಆಪರೇಷನ್ ಟ್ರೈಡೆಂಟ್ ಎಂಬ ಹೆಸರಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಅಂದು ಪಾಕಿಸ್ತಾನದ ವಾಣಿಜ್ಯ ರಾಜಧಾನಿಯಾಗಿದ್ದ ಕರಾಚಿ ಮೇಲೆ ಭಾರತ ಅಕ್ಷರಶಃ ದಿಗ್ಭಂಧನ ಹೇರಿತ್ತು. ಕರಾಚಿ ಬಂದರನ್ನು ಸುತ್ತುವರೆದ್ದ ಭಾರತೀಯ ಯುದ್ಧ ನೌಕೆಗಳು ಪಾಕಿಸ್ತಾನ ಸೈನಿಕರಿಗೆ ಬಿಸಿ ಮುಟ್ಟಿಸಿತ್ತು. ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಭಾರತ ಜಯ ಗಳಿಸುವಲ್ಲಿ ಈ ಪ್ರಸಂಗ ಕೂಡ ಒಂದು ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


