ಮುಸ್ಲಿಂ ವಲಸಿಗರಿಗೆ ಅಮೆರಿಕ ಪ್ರವೇಶಕ್ಕೆನಿಷೇಧ : ಟ್ರಂಪ್ ನೀತಿಗೆ ಜೆಡಿಯು ಸ್ವಾಗತ
ಏಳು ಮುಸ್ಲಿಂ ರಾಷ್ಟ್ರಗಳಿಂದ ಅಮೆರಿಕ ಪ್ರವೇಶಕ್ಕೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ವಲಸೆ ನೀತಿಯನ್ನು...

ನವದೆಹಲಿ: ಏಳು ಮುಸ್ಲಿಂ ರಾಷ್ಟ್ರಗಳಿಂದ ಅಮೆರಿಕ ಪ್ರವೇಶಕ್ಕೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ವಲಸೆ ನೀತಿಯನ್ನು ಜೆಡಿಯು ಸ್ವಾಗತಿಸಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರದಿಂದ ಭಯೋತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ಜೆಡಿಯು ಮುಖಂಡ ಪವನ್ ವರ್ಮಾ ಹೇಳಿದ್ದಾರೆ.
ಭಯೋತ್ಪಾದನೆ ಪೋಷಿಸುತ್ತಿರುವ ಪಾಕಿಸ್ತಾನವನ್ನು ವಿರೋಧಿಸುತ್ತಿರುವ ರಾಷ್ಟ್ರ ಅಮೆರಿಕಾವಾಗಿದೆ. ಹೆಚ್ಚುತ್ತಿರುವ ಪಾಕಿಸ್ತಾನ ಭಯೋತ್ಪಾದನೆಗೆ ಟ್ರಂಪ್ ನೀಡಿರುವ ಪೆಟ್ಟಿನಿಂದ ಉಗ್ರವಾದ ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಟ್ರಂಪ್ ಮುಸ್ಲಿಮರಿಗೆ ನಿಷೇಧ ಹೇರಿರುವುದನ್ನು ಕಾಂಗ್ರೆಸ್ ವಿರೋಧಿಸಿದೆ. ದೇಶದ ಎಲ್ಲಾ ಜನತೆ ಅಪಾಯಕಾರಿ ಎಂದು ಹೇಳಲಾಗುವುದಿಲ್ಲ, ಅನುಮಾನ ಬಂದವರ ಮೇಲೆ ಹದ್ದಿನ ಕಣ್ಣಿಟ್ಟು ಪರಿಶೀಲನೆ ನಡೆಸಬೇಕು. ಅದು ಬಿಟ್ಟು ನಿಷೇಧ ಹೇರುವುದು ತಪ್ಪು ಎಂದು ಕಾಂಗ್ರೆಸ್ ಮುಖಂಡ ಶಕೀಲ್ ಅಹಮದ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಇದೊಂದು ಅಂತಾರಾಷ್ಟ್ರೀಯ ವಿವಾದವಾಗಿದ್ದು, ವಿದೇಶಾಂಗ ಇಲಾಖೆಗಳು ಈ ಸಂಬಂಧ ಗಮನ ಹರಿಸಬೇಕು ಎಂದು ಅವರು ಹೇಳಿದ್ದಾರೆ. ಏಳು ಮುಸ್ಲಿಂ ರಾಷ್ಟ್ರಗಳಿಂದ ಬರುವ ಜನತೆಗೆ ಅಮೆರಿಕಾಗೆ ನಿಷೇಧ ಹೇರುವ ಆದೇಶಕ್ಕೆ ನಿನ್ನೆ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


