ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ 2 ಸಾವಿರ ರು. ನೋಟಿನ ಚಿತ್ರವಿರುವ ಸೀರೆ!
ನೋಟು ನಿಷೇಧ ಬಳಿಕ ಉಂಟಾಗಿದ್ದ ನಗದು ಕೊರೆತೆಯಿಂದಾಗಿ ಜನ ನೋಟಿಗಾಗಿ ಪರದಾಡುತ್ತಿರುವಂತೆಯೇ ಗುಜರಾತ್ ನ ಸೀರೆ ವ್ಯಾಪಾರಿಗಳು ಅದನ್ನೇ ತಮ್ಮ ಬಂಡವಾಳವಾಗಿಸಿಕೊಂಡು 2000 ರು. ನೋಟಿನ ಚಿತ್ರ ವಿರುವ ಸೀರೆಗಳನ್ನು ತಯಾರಿಸಿದ್ದಾರೆ.

ಸೂರತ್: ನೋಟು ನಿಷೇಧ ಬಳಿಕ ಉಂಟಾಗಿದ್ದ ನಗದು ಕೊರೆತೆಯಿಂದಾಗಿ ಜನ ನೋಟಿಗಾಗಿ ಪರದಾಡುತ್ತಿರುವಂತೆಯೇ ಗುಜರಾತ್ ನ ಸೀರೆ ವ್ಯಾಪಾರಿಗಳು ಅದನ್ನೇ ತಮ್ಮ ಬಂಡವಾಳವಾಗಿಸಿಕೊಂಡು 2000 ರು. ನೋಟಿನ ಚಿತ್ರ ವಿರುವ ಸೀರೆಗಳನ್ನು ತಯಾರಿಸಿದ್ದಾರೆ.
ಗುಜರಾತ್ ನ ಸೂರತ್ ನಲ್ಲಿನ ಬಟ್ಟೆ ಅಂಗಡಿಗಳಲ್ಲಿ ಇದೀಗ ಈ ಸೀರೆಗಳದ್ದೇ ದರ್ಬಾರ್, ಗುಲಾಬಿ ಬಣ್ಣದ ನೋಟುಗಳನ್ನು ಮುದ್ರಿಸಲಾಗಿರುವ ಈ ಸೀರೆಗಳನ್ನು ಕೊಳ್ಳಲು ಸೂರತ್ ನ ನಾರಿಯರು ಮುಗಿ ಬಿದ್ದಿದ್ದು, 2000 ರು. ನೋಟುಗಳ ಚಿತ್ರವಿರುವ ಈ ಸೀರೆ ಇದೀಗ ವ್ಯಾಪಕವಾಗಿ ಮಾರಾಟವಾಗುತ್ತಿದೆ. ಒಂದರ್ಥದಲ್ಲಿ ಗುಜರಾತ್ ಜವಳಿ ಉಧ್ಯಮದಲ್ಲಿ ಈ ಹೊಸ 2000 ರು.ನೋಟಿನ ಸೀರೆ ಹೊಸ ಟ್ರೆಂಡ್ ಆಗಿದ್ದು, ಇತರೆ ಜಿಲ್ಲೆಗಳಿಗೂ ಈ ಸೀರೆಗಳನ್ನು ವಿಸ್ತರಿಸುವ ಉದ್ದೇಶವನ್ನು ಸೀರೆ ವ್ಯಾಪಾರಿಗಳು ಹೊಂದಿದ್ದಾರೆ.
ಪ್ರಧಾನಿ ಮೋದಿ ಕಳೆದ ನವೆಂಬರ್ 8ರಂದು 500 ಮತ್ತು 1000 ರು. ನೋಟುಗಳ ನಿಷೇಧ ಮಾಡಿ ಹೊಸ 500 ಮತ್ತು 2000 ರು.ನೋಟುಗಳನ್ನು ಚಲಾವಣೆಗೆ ತಂದಿದ್ದರು. ನಿಷೇಧವಾದ ನೋಟಿಗಿಂತ ಹೊಸ ನೋಟುಗಳ ಪ್ರಮಾಣ ಕಡಿಮೆ ಇದ್ದರಿಂದ ಸಾಮಾನ್ಯವಾಗಿಯೇ ನಗದು ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಹೊಸ ಗುಲಾಬಿ ಬಣ್ಣದ ನೋಟುಗಳಿಗೆ ಎಲ್ಲೆಡೆ ವ್ಯಾಪಕ ಬೇಡಿಕೆ ಕಂಡುಬಂದಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಸೂರತ್ ಬಟ್ಟೆ ವ್ಯಾಪಾರಿಗಳು 2000 ರು.ನೋಟಿನ ಚಿತ್ರಗಳಿರುವ ಸೀರೆಗಳನ್ನು ಉತ್ಪಾದಿಸಿ ಭರ್ಜರಿ ವ್ಯಾಪಾರ ಮಾಡಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


