ನಗದು ರಹಿತ ವಹಿವಾಟು: ಏಮ್ಸ್ ನೊಂದಿಗೆ ಮೊಬಿವಿಕ್ ಒಪ್ಪಂದ
ನಗದು ರಹೈತ ವಹಿವಾಟು/ ಪಾವತಿ ನಡೆಸಲು ನೆರವಾಗುವ ನಿಟ್ಟಿನಲ್ಲಿ ಏಮ್ಸ್ ಮಹತ್ವದ ಹೆಜ್ಜೆ ಇಟ್ಟಿದ್ದು ಆನ್ ಲೈನ್ ಪೇಮೆಂಟ್ ಪೋರ್ಟಲ್ ಸಂಸ್ಥೆ ಮೊಬಿವಿಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Published On :
ನವದೆಹಲಿ: ನಗದು ರಹೈತ ವಹಿವಾಟು/ ಪಾವತಿ ನಡೆಸಲು ನೆರವಾಗುವ ನಿಟ್ಟಿನಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಮಹತ್ವದ ಹೆಜ್ಜೆ ಇಟ್ಟಿದ್ದು ಆನ್ ಲೈನ್ ಪೇಮೆಂಟ್ ಪೋರ್ಟಲ್ ಸಂಸ್ಥೆ ಮೊಬಿವಿಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಮೊಬಿವಿಕ್ ನೊಂದಿಗೆ ಏಮ್ಸ್ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಮೊಬೈಲ್ ವ್ಯಾಲೆಟ್ ಮೂಲಕ ಪಾವತಿಸಬಹುದಾಗಿದೆ. ವೈದ್ಯರಿಗೆ ನೀಡಬೇಕಿರುವ ಶುಲ್ಕ, ತಪಾಸಣೆ ಹಾಗೂ ಇತರ ಸೇವೆಗಳಿಗೆ ನೀಡಬೇಕಿರುವ ಶುಲ್ಕವನ್ನು ಜನವರಿ ತಿಂಗಳ ಮೊದಲ ವಾರದಿಂದಲೇ ನಗದು ರಹಿತ ಪಾವತಿ ಮಾಡಬಹುದಾಗಿದೆ ಎಂದು ಮೊಬಿವಿಕ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮೊಬೈಲ್ ಆಪ್ ನ್ನೂ ಬಿಡುಗಡೆ ಮಾಡಿರುವ ಮೊಬಿವಿಕ್, ಇತ್ತೀಚೆಗಷ್ಟೇ ಅಮುಲ್ ಸೇರಿದಂತೆ ಹಲವು ಕಂಪನಿಗಳೊಂದಿಗೆ ಆನ್ ಲೈನ್ ವಹಿವಾಟು/ ಪಾವತಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


