ದೇಶ

ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ: ಇಂದು ಶಂಕಿತರ ಗುರುತು ಪರೇಡ್

ಮಲಯಾಳಂ ಚಿತ್ರನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ...

ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ: ಇಂದು ಶಂಕಿತರ ಗುರುತು ಪರೇಡ್
ಅಳುವಾದಲ್ಲಿ ಪೊಲೀಸರು ಪಲ್ಸರ್ ಸುನಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವುದು.
Published On :
ಕೊಚ್ಚಿ: ಮಲಯಾಳಂ ಚಿತ್ರನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಗಳನ್ನು ಪತ್ತೆ ಹಚ್ಚಲು ಪರೇಡ್ ಇಂದು ಅಪರಾಹ್ನ ಜಿಲ್ಲಾ ಕಾರಾಗೃಹ ಕಕ್ಕನಾಡ್ ನಲ್ಲಿ  ನಡೆಯಲಿದೆ.
ಆರೋಪಿಯನ್ನು ತಮ್ಮ ಕಸ್ಟಡಿಗೊಪ್ಪಿಸುವಂತೆ ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಕೂಡ ಅಳುವ ಜ್ಯುಡಿಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಪರಿಗಣಿಸಲಿದೆ.ಈ ಮಧ್ಯೆ ತಮ್ಮ ಹೊಸ ಚಿತ್ರದ ಶೂಟಿಂಗ್ ಲೊಕೇಶನ್ ನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಬೇಕೆಂದುಕೊಂಡಿದ್ದ ಯೋಜನೆಯನ್ನು ನಟಿ ಕೈ ಬಿಟ್ಟಿದ್ದಾರೆ. ಇಂದು ಬೆಳಗ್ಗೆ ಮಾಧ್ಯಮದವರನ್ನುದ್ದೇಶಿಸಿ ನಟಿ ಮಾತನಾಡಲಿದ್ದಾರೆ ಎಂಬ ವರದಿಯಾಗಿತ್ತು. ಆದರೆ ಪೊಲೀಸರ ಸಲಹೆಯಂತೆ ಇದನ್ನು ಕೈಬಿಟ್ಟಿದ್ದಾರೆ. ಆರೋಪಿಗಳನ್ನು ಗುರುತನ್ನು ಪತ್ತೆಹಚ್ಚುವ ಮೊದಲು ಮಾಧ್ಯಮದವರನ್ನು ಭೇಟಿಯಾಗುವುದು ತಾರ್ಕಿಕ ಅಂಶವಲ್ಲ ಎಂದು ಪೊಲೀಸರು ಸಂತ್ರಸ್ತೆ ನಟಿಗೆ ಸೂಚಿಸಿದ್ದಾರೆ.
ಪೊಲೀಸರು ಆರೋಪಿಗಳಾದ ಪಲ್ಸರ್ ಸುನಿ ಮತ್ತು ವಿಜೀಶ್ ನನ್ನು ಜ್ಯುಡಿಶಿಯಲ್ ಪ್ರಥಮ ದರ್ಜೆ ನ್ಯಾಯಾಂಗದ ಮುಂದೆ ಇಂದು ಹಾಜರುಪಡಿಸಲಿದ್ದಾರೆ.
ನಟಿಯನ್ನು ಕಳೆದ 17ರಂದು ಕಾರಿನಲ್ಲಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.