ಮಹಾಶಿವರಾತ್ರಿ: ಕೊಯಂಬತ್ತೂರಿನಲ್ಲಿ 112 ಅಡಿ ಎತ್ತರದ ಶಿವನ ವಿಗ್ರಹ ಉದ್ಘಾಟಿಸಲಿರುವ ಪ್ರಧಾನಿ
ಕೊಯಂಬತ್ತೂರಿನಲ್ಲಿ ಈಶ ಫೌಂಡೇಷನ್ ನಿರ್ಮಿಸಿರುವ 112 ಅಡಿ ಎತ್ತರದ ಶಿವನ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

Published On :
ಕೊಯಂಬತ್ತೂರು: ಫೆ.24 ರಂದು ದೇಶಾದ್ಯಂತ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತಿದ್ದು, ಕೊಯಂಬತ್ತೂರಿನಲ್ಲಿ ಈಶ ಫೌಂಡೇಷನ್ ನಿರ್ಮಿಸಿರುವ 112 ಅಡಿ ಎತ್ತರದ ಶಿವನ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ನಿರ್ಮಿತ ವಿಗ್ರಹ ಉದ್ಘಾಟನಾ ಕಾರ್ಯಕ್ರಮ ಸಂಜೆ.6 ಗಂಟೆಗೆ ನಡೆಯಲಿದೆ. ವಿಗ್ರಹ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿಶ್ವಾದ್ಯಂತ ನಡೆಯಲಿರುವ ’ಮಹಾ ಯೋಗ ಯಜ್ಞಕ್ಕೆ ಅಗ್ನಿಯನ್ನು ಪ್ರತಿಷ್ಠಾಪಿಸಲಿದ್ದಾರೆ. ಮುಂದಿನ ವರ್ಷದ ವೇಳೆಗೆ 100 ಜನರಿಗೆ ಸರಳ ಯೋಗವನ್ನು ಕಲಿಸಿಕೊಡುವುದಾಗಿ ಕನಿಷ್ಠ 1 ಮಿಲಿಯನ್ ಜನರು ಪ್ರತಿಜ್ಞೆ ಕೈಗೊಳ್ಳುವುದು ಮಹಾ ಯೋಗ ಯಜ್ಞದ ಮುಖ್ಯ ಉದ್ದೇಶವಾಗಿದೆ.
ಸಂಜೆ 5:30 ರ ವೆಳೆಗೆ ಸುಲೂರ್ ಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ಹೆಲಿಕಾಫ್ಟರ್ ನಲ್ಲಿ ಈಶ ಫೌಂಡೇಷನ್ ಗೆ ತೆರಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿಮಹಾಶಿವರಾತ್ರಿMaha ShivratriIsha Foundation112-foot Shiva idolಈಶ ಫೌಂಡೇಶನ್112 ಅಡಿ ಎತ್ತರದ ಶಿವನ ವಿಗ್ರಹ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


